alex Certify ಸತತ 3ನೇ ಬಾರಿ ಆಯ್ಕೆಯಾದ ಸ್ವಕ್ಷೇತ್ರ ವಾರಣಾಸಿಗೆ ಇಂದು ಮೋದಿ ಭೇಟಿ: ದೇಶದ ರೈತರ ಖಾತೆಗೆ ಹಣ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ 3ನೇ ಬಾರಿ ಆಯ್ಕೆಯಾದ ಸ್ವಕ್ಷೇತ್ರ ವಾರಣಾಸಿಗೆ ಇಂದು ಮೋದಿ ಭೇಟಿ: ದೇಶದ ರೈತರ ಖಾತೆಗೆ ಹಣ ಬಿಡುಗಡೆ

ನವದೆಹಲಿ: ಸತತ ಮೂರನೇ ಬಾರಿ ವಾರಣಾಸಿಯಿಂದ ಆಯ್ಕೆಯಾಗಿ ಮೂರನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಇಂದು ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ.

ಕಿಸಾನ್ ಸಮ್ಮೇಳನದಲ್ಲಿ ಭಾಗಿಯಾಗಿ 2000 ರೂ. ಕಂತು ಬಿಡುಗಡೆ ಮಾಡಲಿದ್ದಾರೆ. ಆ ನಂತರ ಗಂಗಾ ಆರತಿಯಲ್ಲಿ ಭಾಗವಹಿಸಲಿದ್ದಾರೆ. ಕಿಸಾನ್ ಸಮ್ಮೇಳನದಲ್ಲಿ ಭಾಗವಹಿಸಲಿರುವ ಪ್ರಧಾನಿ 9.26 ಕೋಟಿ ರೈತರಿಗೆ ವಾರ್ಷಿಕ ತಲಾ ಆರು ಸಾವಿರ ರೂಪಾಯಿ ನೀಡುವ ಕಿಸಾನ್ ಸಮ್ಮಾನ್ ಯೋಜನೆಯ 20,000 ಕೋಟಿ ರೂ. ಕಂತು ಬಿಡುಗಡೆ ಮಾಡಲಿದ್ದಾರೆ.

ದಶಾಶ್ವಮೇಧ ಘಾಟ್ ನಲ್ಲಿ ಸಂಜೆ 7 ಗಂಟೆಗೆ ಗಂಗಾ ಆರತಿಯಲ್ಲಿ ಭಾಗವಹಿಸಲಿದ್ದು, ರಾತ್ರಿ 8 ಗಂಟೆಗೆ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ತಮ್ಮ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮೋದಿ ವಾರಣಾಸಿಗೆ ಭೇಟಿ ನೀಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...