ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿನ ಸಾರ್ವಜನಿಕರ ಶಿಥಿಲಗೊಂಡಿರುವ ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವ ನಿವಾಸಿಗಳಿಗೆ ಡಾ; ಬಿ.ಆರ್.ಅಂಬೇಡ್ಕರ್, ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರ 50, ಸಾಮಾನ್ಯ 329 ಸೇರಿ ಒಟ್ಟು 379 ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ 86, ಪರಿಶಿಷ್ಟ ಪಂಗಡ 35, ಒಟ್ಟು 500 ಹೆಚ್ಚುವರಿಯಾಗಿ ನಿಗದಿಪಡಿಸಲಾಗಿದ್ದು, ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ.
ಆಸಕ್ತಿಯುಳ್ಳ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್(ಗಂಡ ಮತ್ತು ಹೆಂಡತಿ), ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಚಾಲ್ತಿ ಸಾಲಿನ ಇ-ಸ್ವತ್ತು, ಇ.ಸಿ., ನಕಲು ಪ್ರತಿ ಮತ್ತು 2 ಭಾವಚಿತ್ರ ಹಾಗೂ ಅರ್ಜಿಯೊಂದಿಗೆ ಪ್ರಕಟಣೆ ಹೊರಡಿಸಿದ 30 ದಿನದೊಳಗಾಗಿ ಪಾಲಿಕೆ ಕಚೇರಿಗೆ ಸಲ್ಲಿಸಲು ಆಯುಕ್ತರು ತಿಳಿಸಿದ್ದಾರೆ.