BREAKING : ಖ್ಯಾತನಟ ಪ್ರದೀಪ್ ಕೆ.ವಿಜಯನ್ ಸಾವು, ಮನೆಯಲ್ಲಿ ಶವವಾಗಿ ಪತ್ತೆ..!

ಚೆನ್ನೈ :   ಖಳನಾಯಕ ಮತ್ತು ಹಾಸ್ಯನಟ  ಪ್ರದೀಪ್ ಕೆ.ವಿಜಯನ್ ಮೃತಪಟ್ಟಿದ್ದು, ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನಟ ಪ್ರದೀಪ್ ವಿಜಯನ್, ತೆಗಿಡಿ ಮತ್ತು ಹೇ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಖಳನಾಯಕ ಮತ್ತು ಹಾಸ್ಯನಟನಾಗಿ ನಟಿಸಿದ್ದಾರೆ, ನಟನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

ನಟ ಪ್ರದೀಪ್ ಅವಿವಾಹಿತರಾಗಿದ್ದು, ಚೆನ್ನೈನ ಪಾಲವಕ್ಕಂನ ಶಂಕರಪುರಂ 1 ಸ್ಟ್ರೀಟ್ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಪ್ರದೀಪ್ ಗೆ ಅವರ ಸ್ನೇಹಿತರುಯ ಹಲವಾರು ಬಾರಿ ಕರೆ ಮಾಡಿದರೂ ಎರಡು ದಿನಗಳಿಂದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಸ್ನೇಹಿತರೊಬ್ಬರು ಅವರ ಮನೆಗೆ ತೆರಳಿದ್ದಾರೆ. ಆದರೆ ಮನೆಯ ಡೋರ್ ಲಾಕ್ ಆಗಿತ್ತು, ಅಲ್ಲದೇ ಶವದ ಕೊಳೆತ ವಾಸನೆ ಕೂಡ ಬರುತ್ತಿತ್ತು. ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಬಾಗಿಲು ಒಡೆದು ನೋಡಿದಾಗ ಪ್ರದೀಪ್ ಶವ ಪತ್ತೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read