ಕಾಂಗೋದ ರಾಜಧಾನಿ ಕಿನ್ಶಾಸಾ ಬಳಿ ನದಿಯಲ್ಲಿ 270 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ದೋಣಿ ಮುಳುಗಿ ಕನಿಷ್ಠ 80 ಜನರು ಸಾವನ್ನಪ್ಪಿದ್ದಾರೆ ವರದಿ ತಿಳಿಸಿದೆ.
ಕ್ವಾ ನದಿಯ ಮೈ-ಎನ್ಡೊಂಬೆ ಪ್ರಾಂತ್ಯದಲ್ಲಿ ದೋಣಿ ಮಗುಚಿ ಬಿದ್ದಿದೆ ಎಂದು ಮೂಲಗಳು ತಿಳಿಸಿದೆ.
ಕಾಂಗೋದ ರಾಜಧಾನಿ ಕಿನ್ಶಾಸಾಗೆ 271 ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಎಂಜಿನ್ ವೈಫಲ್ಯದಿಂದಾಗಿ ಮುಳುಗಿದೆ ಎಂದು ಕಾಂಗೋ ಅಧ್ಯಕ್ಷರು ತಿಳಿಸಿದ್ದಾರೆ. 271 ಜನರಲ್ಲಿ 86 ಪ್ರಯಾಣಿಕರು ಪ್ರಾಣ ಕಳೆದುಕೊಂಡರೆ, 185 ಜನರು ಹತ್ತಿರದ ನಗರ ಮುಶಿ ಬಳಿ ಸುಮಾರು 70 ಕಿಲೋಮೀಟರ್ (43 ಮೈಲಿ) ದೂರದಲ್ಲಿ ದಡಕ್ಕೆ ಈಜುವಲ್ಲಿ ಯಶಸ್ವಿಯಾದರು ಎಂದು ಮೇಕರ್ ಹೇಳಿದ್ದಾರೆ. ದೋಣಿ ನದಿಯ ದಡದ ಅಂಚಿಗೆ ಡಿಕ್ಕಿ ಹೊಡೆದು ಮುರಿದುಬಿದ್ದಿದೆ ಎಂದು ಅವರು ಹೇಳಿದ್ದಾರೆ.