ಬೆಚ್ಚಿ ಬೀಳಿಸುತ್ತೆ ಈ ಘಟನೆ: ONLINE ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮಾನವ ಬೆರಳು ಪತ್ತೆ….!

ಕೈ ಬೆರಳಲ್ಲಿ ಹಿಡಿದುಕೊಂಡು ಐಸ್ ಕ್ರೀಂ ತಿಂತೀವಿ. ಆದ್ರೆ ತಿನ್ನೋ ಐಸ್ ಕ್ರೀಂನಲ್ಲೇ ಬೆರಳು ಪತ್ತೆಯಾದ್ರೆ!? ಆ ಘಟನೆಯನ್ನ ಊಹಿಸಿಕೊಳ್ಳೋದಕ್ಕೂ ಭಯವಾಗುತ್ತೆ ಅಲ್ವಾ? ಆದ್ರೆ ಇಂತಹ ಘಟನೆ ನಿಜಕ್ಕೂ ಜರುಗಿದೆ.

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಂ ಕೋನ್‌ನಲ್ಲಿ ಮಾನವ ಬೆರಳನ್ನು ಕಂಡು ಗ್ರಾಹಕ ಮಹಿಳೆ ಆಘಾತಕ್ಕೊಳಗಾಗಿರುವ ಘಟನೆ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ.

ಬೆರಳು ನೋಡಿ ಶಾಕ್ ಆದ ಮಹಿಳೆ ಮಲಾಡ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಐಸ್ ಕ್ರೀಮ್ ತಯಾರಕರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಯುಮ್ಮೋ ಐಸ್ ಕ್ರೀಂ ಕಂಪನಿ ವಿರುದ್ಧ ತನಿಖೆ ನಡೆಸ್ತಿದ್ದಾರೆ. ಐಸ್ ಕ್ರೀಮ್ ಕೋನ್ ಮತ್ತು ಮಾನವ ಬೆರಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದ್ದು ವರದಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read