Video | ಸುಡುಬಿಸಿಲಿನ ಸಂದರ್ಭದಲ್ಲಿ ಕಾರ್ ಸೀಟ್ ಮೇಲೆ ವಾಟರ್ ಬಾಟಲ್ ಇಡ್ತೀರಾ ? ಹಾಗಾದ್ರೆ ತಪ್ಪದೇ ಓದಿ ಈ ಸುದ್ದಿ

ರಸ್ತೆ ಬದಿಯಲ್ಲಿ ಕಾರೊಂದು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಾಹನದೊಳಗೆ ಬಿಟ್ಟಿದ್ದ ನೀರಿನ ಬಾಟಲಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.

ತೀವ್ರವಾದ ಬಿಸಿಲಿನಲ್ಲಿ ನಿಂತಿದ್ದ ಕಾರ್ ಶಾಖದಿಂದಾಗಿ ಸುಟ್ಟುಹೋಗುತ್ತಿದ್ದು ದಟ್ಟವಾದ ಬೆಂಕಿಯ ಜ್ವಾಲೆ ಹೊರಬರುತ್ತಿರುವುದು ಕಂಡುಬಂದಿದೆ. ಘಟನೆಯ ಸ್ಥಳವು ಅಸ್ಪಷ್ಟವಾಗಿದ್ದರೂ, ಇದು ದೆಹಲಿ-ಎನ್‌ಸಿಆರ್ ಪ್ರದೇಶದ ಘಟನೆ ಎಂದು ನಂಬಲಾಗಿದೆ. ಇದು ಈ ವರ್ಷದ ಆರಂಭದಲ್ಲಿ ಬಿಸಿಶಾಖದ ಅಲೆಗೆ ಸಾಕ್ಷಿಯಾಗಿದೆ.

ತೀವ್ರತರವಾದ ಬಿಸಿಲಿರುವಾಗ ಕಾರ್ ನ ಸೀಟ್ ಮೇಲೆ ನೀರಿನ ಖಾಲಿ ಬಾಟಲಿಯನ್ನು ಬಿಡುವುದರಿಂದ ಈ ರೀತಿ ಬೆಂಕಿ ಸಂಭವಿಸಿದೆ ಎಂದಿದ್ದು, ಬಿಸಿಲಿನ ವಾತಾವರಣದಲ್ಲಿ ಸೀಟುಗಳ ಮೇಲೆ ನೀರಿನ ಬಾಟಲಿಗಳನ್ನು ಇಡುವುದು ಅಪಾಯಕಾರಿ ಎಂದು ಸಲಹೆ ನೀಡಲಾಗಿದೆ.

ಕಾರ್ ಹೊತ್ತಿ ಉರಿಯುತ್ತಿರುವ ವಿಡಿಯೋ ಹಂಚಿಕೊಂಡಿರುವ ಇನ್ ಸ್ಟಾಗ್ರಾಂ ಬಳಕೆದಾರರೊಬ್ಬರು “ಈ ಬಾಟಲಿಗಳು ನನ್ನ ಕಾರ್ ಸೀಟ್‌ಗಳನ್ನು ಸುಡುತ್ತಿವೆ,” ಈ ಪಾರದರ್ಶಕ ಪ್ಲಾಸ್ಟಿಕ್ ವಾಟರ್ ಬಾಟಲ್ ಭೂತಗನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಆಸನವನ್ನು ಸುಡುವ ಸಾಮರ್ಥ್ಯವನ್ನು ಹಿಡಿದಿಟ್ಟುಕೊಳ್ಳುತ್ತವೆ. ಅಂತಿಮವಾಗಿ ಕಾರಿಗೆ ಬೆಂಕಿ ಹಚ್ಚುತ್ತವೆ ಎಂದು ಹೇಳಿದ್ದಾರೆ.

ಕಾರಿನ ಆಸನದ ಮೇಲೆ ಸೂರ್ಯನ ಬೆಳಕು ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ತನ್ನ ವೀಡಿಯೋದಲ್ಲಿ ತಿಳಿಸಿದ್ದಾರೆ. ನೀರಿನ ಬಾಟಲಿ ಗಾಜಿನಂತೆ ಕೆಲಸ ಮಾಡುತ್ತದೆ. ಈ ಮೂಲಕ ಹಾದುಹೋಗುವ ಸೂರ್ಯನ ಬೆಳಕು ತೀವ್ರ ಶಾಖದಿಂದ ಹೊಗೆಯನ್ನು ಬಿಡುಗಡೆ ಮಾಡುತ್ತದೆ ನಂತರ ಸೀಟ್ ಮೇಲೆ ಬೆಂಕಿ ಕಾಣಿಸಿಕೊಂಡು ಕಾರ್ ಹೊತ್ತಿಕೊಳ್ಳುತ್ತದೆ ಎಂದಿದ್ದಾರೆ.

“ನೀರಿನ ಬಾಟಲ್ ನಿಮ್ಮ ಕಾರಿಗೆ ಬೆಂಕಿ ಹಚ್ಚಬಹುದು. ಆದ್ದರಿಂದ ನೀವು ಈ ಬಾಟಲಿಗಳನ್ನು ವಾಹನದಲ್ಲಿ ಇಡುತ್ತಿದ್ದರೆ ಯಾವಾಗಲೂ ಹುಷಾರಾಗಿ ಗಮನಿಸಿ. ನಂತರ ಅವುಗಳನ್ನು ಸೀಟಿನ ಕೆಳಗೆ ಇರಿಸಿ (ಸೂರ್ಯನ ಬೆಳಕಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ದೂರ)” ಎಂದು ಹೇಳಿದ್ದಾರೆ.

ನೀರಿನ ಬಾಟಲಿಗಳು ನಿಮ್ಮ ಕಾರಿಗೆ ಬೆಂಕಿ ಹಚ್ಚಬಹುದೇ?
ಸುಡುವ ಶಾಖಕ್ಕೆ ತೆರೆದುಕೊಳ್ಳದ ನೀರಿನ ಬಾಟಲಿಗಳು ಸ್ಫೋಟಕವಾಗಿರಬಹುದು ಎಂಬ ಸಮರ್ಥನೆಯನ್ನು ಪರಿಶೀಲಿಸಲು ಹಲವಾರು ವರದಿಗಳಿವೆ.

ಕ್ಯಾಲಿಫೋರ್ನಿಯಾ ಮೂಲದ ಸುದ್ದಿವಾಹಿನಿ ABC 30 ಈ ವಿಷಯವನ್ನು ತಿಳಿಸಿದ್ದು, ಬಿಸಿಲಿನ ದಿನದಲ್ಲಿ ನೀರಿನ ಬಾಟಲಿಗಳನ್ನು ಕಾರಿನಲ್ಲಿ ಇಡುವುದು ಅಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ. ಇದರ ಹಿಂದಿನ ಕಾರಣವೆಂದರೆ ಸೂರ್ಯನ ಬೆಳಕಿನಿಂದ ಉಂಟಾಗುವ ತೀವ್ರವಾದ ಶಾಖವು ಬೆಂಕಿಯನ್ನು ಉಂಟುಮಾಡಬಹುದು ಮತ್ತು ವಾಹನವನ್ನು ಸುಟ್ಟುಹಾಕಬಹುದು. ಹಾಗಾಗಿ ಕಾರಿನಲ್ಲಿ ಖಾಲಿ ಬಾಟಲಿಯನ್ನು ಬಿಡುವುದು ಅಪಾಯ ಎಂದಿದೆ.

https://twitter.com/Atheist_Krishna/status/1800780679879487914?ref_src=twsrc%5Etfw%7Ctwcamp%5Etweetembed%7Ctwterm%5E1800780679879487914%7Ctwgr%5E02c27a82715a51254f32747b2e9f451189839e90%7Ctwcon%5Es1_&ref_url=https%3A%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read