ಬೆಂಗಳೂರು: ಮಧ್ಯಂತರ ಜಾಮೀನು ಬೆನ್ನಲ್ಲೇ ಭವಾನಿ ರೇವಣ್ಣ ಎಸ್ಐಟಿ ಮುಂದೆ ವಿಚಾರಣೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಕೇಸ್ ನಲ್ಲಿ ಭವಾನಿ ರೇವಣ್ಣಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಮಧ್ಯಾಹ್ನ 1 ಗಂಟೆಯೊಳಗೆ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಇದೀಗ ಭವಾನಿ ರೇವಣ್ಣ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಭವಾನಿ ಪರ ವಕೀಲ ಅರುಣ್ ಕೂಡ್ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. 5 ಗಂಟೆ ಕಾಲ ಮಾತ್ರ ಕಸ್ಟಡಿಯಲ್ಲಿಟ್ಟುಕೊಳ್ಳಬಹುದು ಎಂದು ಹೈಕೋರ್ಟ್ ಎಸ್ ಐಟಿಗೆ ಸೂಚಿಸಿದೆ.
ಭವಾನಿ ರೇವಣ್ಣರನ್ನು ಬಂಧಿಸುವಂತಿಲ್ಲ. ಭವಾನಿ ರೇವಣ್ಣ ತನಿಖೆಗೆ ಸಹಕಾರ ನೀಡಬೇಕು. ಹಾಸನ, ಕೆ.ಆರ್.ನಗರಕ್ಕೆ ಪ್ರವೇಶಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.