ಉಪ್ಪಿನಕಾಯಿ ಎಂದರೆ ಬಹಳಷ್ಟು ಜನ ಇಷ್ಟಪಡುತ್ತಾರೆ. ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು ಎಂದು ಹೇಳುತ್ತಾರೆ. ಹಾಗಾಗಿ ಕೆಲವರು ಉಪ್ಪಿನಕಾಯಿಯನ್ನು ಮಾರುಕಟ್ಟೆಯಿಂದ ಖರೀದಿಸಿ ತಂದರೆ ಕೆಲವರು ಅದನ್ನು ಮನೆಯಲ್ಲಿಯೇ ತಯಾರಿಸುತ್ತಾರೆ. ಹಾಗಾಗಿ ಉಪ್ಪಿನಕಾಯಿ ಮನೆಯಲ್ಲಿಯೇ ಮಾಡುವವರು ಅದಕ್ಕಾಗಿ ಮಾವಿನಕಾಯನ್ನು ಆರಿಸುವಾಗ ಈ ಸಲಹೆ ಪಾಲಿಸಿ.
ಉಪ್ಪಿನಕಾಯಿಗೆ ದಪ್ಪ ಸಿಪ್ಪೆಯ ಮಾವಿನಕಾಯಿಯನ್ನು ಆರಿಸಿ. ಇವು ಹೆಚ್ಚು ಹುಳಿಯಾಗಿರುತ್ತವೆ ಮತ್ತು ಉಪ್ಪಿನಕಾಯಿಯ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚು ಕಾಲ ಇಡಬಹುದು.
ಉಪ್ಪಿನಕಾಯಿಗೆ ಚಿಕ್ಕ ಗಾತ್ರದ ಮಾವಿನ ಕಾಯಿಯನ್ನು ಆರಿಸಿ. ಯಾಕೆಂದರೆ ಅವು ಕಾಯಿಯಾಗಿರುತ್ತದೆ ಮತ್ತು ಹುಳಿ ಇರುತ್ತದೆ, ಸಿಹಿ ಇರುವುದಿಲ್ಲ. ಹಾಗೇ ಗಾಢವಾದ ಹಸಿರು ಬಣ್ಣಯದಲ್ಲಿರುವ ಮಾವಿನ ಕಾಯಿಯನ್ನು ಆರಿಸಿ.
ಅಷ್ಟೇ ಅಲ್ಲದೇ ಹುಳಿಯಾಗಿರುವ ಮಾವಿನ ಕಾಯಿಯನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸಿ.ಇದು ಹೆಚ್ಚು ಪರಿಮಳಯುಕ್ತವಾಗಿರುತ್ತದೆ ಮತ್ತು ಬಹಳ ರುಚಿಕರವಾಗಿರುತ್ತದೆ.
ಹಾಗೇ ನಾರುಗಳಿಂದ ತುಂಬಿರುವ ಮಾವಿನಕಾಯಿಯನ್ನು ಉಪ್ಪಿನಕಾಯಿ ತಯಾರಿಸಲು ಆಯ್ಕೆ ಮಾಡಿ.
ಹಾಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಾವಿನ ಕಾಯಿ ಖರೀದಿಸಿದರೆ ಉಪ್ಪಿನಕಾಯಿ ಬಹಳ ರುಚಿಕರವಾಗಿರುತ್ತದೆ.