HomeKarnatakaವಾಲ್ಮೀಕಿ ಅಭಿವೃದ್ಧಿ ನಿಗದಲ್ಲಿ ಅಕ್ರಮ: ಹೈದರಾಬಾದ್ ನ ಫಾನಾನ್ಸ್ ಸಹಕಾರಿ ಬ್ಯಾಂಕ್ ನ 45 ಕೋಟಿ...

ವಾಲ್ಮೀಕಿ ಅಭಿವೃದ್ಧಿ ನಿಗದಲ್ಲಿ ಅಕ್ರಮ: ಹೈದರಾಬಾದ್ ನ ಫಾನಾನ್ಸ್ ಸಹಕಾರಿ ಬ್ಯಾಂಕ್ ನ 45 ಕೋಟಿ ಹಣ ಜಪ್ತಿ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಧಿಸಿದಂತೆ ಎಸ್ಐಟಿ ತನಿಖೆ ಚುರುಕುಗೊಳಿಸಿದ್ದು, ಹೈದರಾಬಾದ್ ನ ಫಸ್ಟ್ ಫೈನಾನ್ಸ್ ಸಹಕಾರಿ ಬ್ಯಾಂಕ್ ನಲ್ಲಿದ್ದ 45 ಕೋಟಿ ರೂ ಹಣ ಜಪ್ತಿ ಮಾಡಿದೆ.

ಬಂಧಿತ ಆರೋಪಿ ಸತ್ಯನಾರಾಯನ ಒಡೆತನ ಬ್ಯಾಂಕ್ ಇದಾಗಿದ್ದು, ಇದೇ ಬ್ಯಾಂಕ್ ಖಾತೆಗೆ 94.73 ಕೋಟಿ ರೂ ವರ್ಗಾವಣೆಯಾಗಿತ್ತು. ಬ್ಯಾಂಕ್ ನ 18 ನಕಲಿ ಖಾತೆಗಳಿಗೆ 94.73 ಕೋಟಿ ವರ್ಗಾವಣೆಯಾಗಿತ್ತು.

ವರ್ಗಾವಣೆಯಾಗಿರುವ ಬಹುತೇಕ ಹಣದಲ್ಲಿ ಡ್ರಾ ಆಗಿದೆ. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ ಎಂಬುದರ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಈವರೆಗೆ ಎಸ್ಐಟಿ ಐವರನ್ನು ಬಂಧಿಸಿದೆ. ಐವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular