ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾದರೆ ಮಾತ್ರ ಅದರಲ್ಲಿರುವ ಪೋಷಕಾಂಶ ದೇಹಕ್ಕೆ ಸಿಗುತ್ತದೆ. ಆದರೆ ಕೆಲವರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಗ್ಯಾಸ್, ಆ್ಯಸಿಡಿಟಿ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತಪ್ಪಿಸಲು ನೀವು ಊಟವಾದ ಬಳಿಕ ಈ ಯೋಗಾಸನ ಅಭ್ಯಾಸ ಮಾಡಿ.
ಪವನ್ಮುಕ್ತಾಸನ : ಇದನ್ನು ಮಾಡಲು ನೀವು ಬೆನ್ನಿನ ಮೇಲೆ ಮಲಗಿ ನಿಧಾನವಾಗಿ ಉಸಿರಾಡಿ, ನಿಮ್ಮ ಎರಡು ಕಾಲುಗಳನ್ನು ಒಟ್ಟಿಗೆ ಎತ್ತಿ ಮೊಣಕಾಲುಗಳನ್ನು ಬಾಗಿಸಿ ನಿಮ್ಮ ಎದೆಯ ಕಡೆಗೆ ತನ್ನಿ. ಇದನ್ನು ಮಾಡುವಾಗ ನಿಮ್ಮ ಎರಡು ಕೈಗಳಿಂದ ಕಾಲಗಳನ್ನು ಹಿಡಿಯಿರಿ. ನಿಮ್ಮ ತೊಡೆ ಹೊಟ್ಟೆಯನ್ನು ಸ್ಪರ್ಶಿಸಲು ಬಿಡಿ. ಇದನ್ನು ಸುಮಾರು 30 ಸೆಕೆಂಡುಗಳ ಕಾಲ ಮಾಡಿ.
ಸೇತುಬಂಧಾಸನ(ಸೇತುವೆ ಭಂಗಿ) : ನೀವು ಬೆನ್ನಿನ ಮೇಲೆ ಮಲಗಿ ನಿಮ್ಮ ಪಾದಗಳನ್ನು ನೆಲದ ಮೇಲೆ ಚಪ್ಪಟೆ ಮಾಡಿ ನಿಮ್ಮ ಕುತ್ತಿಗೆ ಮತ್ತು ನಿಮ್ಮ ತಲೆ ಚಾಪೆಯ ಮೇಲೆ ಚಪ್ಪಟೆಯಾಗಿರುವಂತೆ ನಿಮ್ಮ ದೇಹವನ್ನು ಮೇಲಕ್ಕೆತ್ತಿ. ನಿಮ್ಮ ಕೈಗಳನ್ನು ಬೆನ್ನಿನ ಕೆಳಗೆ ಇಡಬಹುದು.
ಗೋಮುಖಾಸನ : ಮೊದಲು ನೆಲದ ಮೇಲೆ ಕುಳಿತು ನಿಮ್ಮ ಸೊಂಟವನ್ನು ನೇರವಾಗಿ ಇರಿಸಿ. ನಂತರ ಒಂದು ಪಾದವನ್ನು ಇನ್ನೊಂದು ಕಾಲಿನ ಮೇಲೆ ಇರಿಸಿ. ನಿಮ್ಮ ಎಡಗೈಯನ್ನು ಮೊಣಕೈ ಬಗ್ಗಿಸಿ ಭುಜದಿಂದ ಬೆನ್ನಿನ ಹಿಂದೆ ಇರಿಸಿ. ಹಾಗೇ ಬಲಗೈಯನ್ನು ಬೆನ್ನಿನ ಹಿಂಭಾಗದಲ್ಲಿ ಇರಿಸಿ ಎರಡು ಕೈಗಳನ್ನು ಹಿಡಿದುಕೊಳ್ಳಿ, ಆಗ ನಿಮ್ಮ ಬೆನ್ನು ನೇರವಾಗಿರಲಿ.