ಚೇತನ್ ಚಂದ್ರಶೇಖರ್ ನಿರ್ದೇಶನದ ‘ಆರಾಟ’ ಚಿತ್ರ ಇತ್ತೀಚಿಗಷ್ಟೇ ತುಳು ನಾಡಿನ ಕುರಿತ ‘ಡೆನ್ನ ಡೆನ್ನಾನ’ ಎಂಬ ಸೊಗಸಾದ ಹಾಡಿನ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ‘ಆರಾಟ’ ಚಿತ್ರತಂಡ ನಾಳೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆ ಮಾಡುವುದಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರದಲ್ಲಿ ರಂಜನ್ ಕಾಸರಗೋಡು ಸೇರಿದಂತೆ ವಿನ್ಯಾರಾಯ್, ಜ್ಯೋತಿಷ್ ಶೆಟ್ಟಿ, ಅನಿಲ್ ರಾಜ್ ಉಪ್ಪಳ, ಸುನಿಲ್ ನೆಲ್ಲಿಗುಡ್ಡೆ, ರವಿ ರಾಮ ಕುಂಜ, ಚೇತನ್ ರಾಯ್ ಮಾನಿ, ಸಂದೀಪ್ ಭಕ್ತ, ಉತ್ಸವ್ ವಾಮನ್ ಜೋರ್, ಮತ್ತು ನಯನ ಸಾಲಿಯಾನ್ ಬಣ್ಣ ಹಚ್ಚಿದ್ದಾರೆ. ಪಿಎನ್ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಾಘವೇಂದ್ರ ಹೊಳ್ಳ ಮತ್ತು ಟಿ ರಾಮಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಶಮೀರ್ ಮುಡಿಪು ಸಂಗೀತ ಸಂಯೋಜನೆ ನೀಡಿದ್ದು, ದಾಮು ಕನಸೂರ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ರವಿ ಸುವರ್ಣ ಛಾಯಾಗ್ರಹಣವಿದೆ.