ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದು ಶುಭಕರ. ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ.
ಓಡುತ್ತಿರುವ ಕುದುರೆ ಶುಭ ಹೌದು. ಆದ್ರೆ ಅದಕ್ಕೂ ಕೆಲ ನಿಯಮಗಳಿವೆ. ಯಾವಾಗ್ಲೂ ಕುದುರೆ ಸಂಖ್ಯೆ ಏಳಿಕ್ಕಿಂತ ಹೆಚ್ಚಿರಬಾರದು. ಇಂದ್ರಧನಸ್ಸಿನ ಸಂಖ್ಯೆ 7 ಇರುತ್ತದೆ. ಸಪ್ತ ಋಷಿ, ಸಪ್ತ ಪದಿ, ಸಪ್ತ ಜನ್ಮ ಎಲ್ಲವೂ ಏಳರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
ಅತಿಯಾದ ಸಾಲದಲ್ಲಿ ಬಿದ್ದವರು ಮನೆ ಅಥವಾ ಕಚೇರಿಯ ವಾಯುವ್ಯ ದಿಕ್ಕಿನಲ್ಲಿ ಕುದುರೆ ಚಿತ್ರವನ್ನು ಹಾಕಬೇಕು. ಜೋಡಿ ಕುದುರೆ ಚಿತ್ರ ಹಾಕುವುದು ಶ್ರೇಯಸ್ಕರ.
ಕಚೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ 7 ಕುದುರೆಯ ಚಿತ್ರವನ್ನು ಹಾಕಬೇಕು. ಆಫೀಸ್ ಕಡೆಗೆ ಕುದುರೆ ಮುಖ ಮಾಡಿಕೊಂಡಿರಬೇಕು. ದಕ್ಷಿಣದ ಗೋಡೆಗೆ ಕುದುರೆ ಚಿತ್ರ ಹಾಕಬೇಕು. ಇದ್ರಿಂದ ನಾವು ಮಾಡುವ ಕೆಲಸಕ್ಕೆ ವೇಗ ಸಿಕ್ಕಂತಾಗುತ್ತದೆ.
ಏಳು ಕುದುರೆಗಳ ಫೋಟೋ ಹಾಕುವುದರಿಂದ ಜೀವನದಲ್ಲಿ ಏರಿಳಿತಗಳಾಗುವುದಿಲ್ಲ. ಮನೆಯಲ್ಲಿ ತಾಯಿ ಲಕ್ಷ್ಮಿ ವಾಸಿಸುತ್ತಾಳೆ. ಇದಕ್ಕಾಗಿ ಮನೆಯ ಮುಖ್ಯ ಹಾಲ್ ನಲ್ಲಿ ಮನೆಯೊಳಗೆ ಬರ್ತಾ ಇರುವಂತಹ ಕುದುರೆಯ ಚಿತ್ರವನ್ನು ಹಾಕಬೇಕು.