‘ವರ್ಗಾವಣೆ’ ನಿರೀಕ್ಷೆಯಲ್ಲಿರುವ ರಾಜ್ಯದ ‘ಆರೋಗ್ಯ ಇಲಾಖೆ’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್..! 30-05-2024 10:19AM IST / No Comments / Posted In: Karnataka, Latest News, Live News ಬೆಂಗಳೂರು : 2024-25 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ 2011, 2013 ಮತ್ತು 2017 ರಂತೆ ಕಾಲ ಕಾಲಕ್ಕೆ ಆದ ತಿದ್ದುಪಡಿಗಳ ಅನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ಸಮಾಲೋಚನೆ ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿ ವರ್ಷ ಏಪ್ರಿಲ್/ಮೇ ಮಾಹೆಯಲ್ಲಿ ವರ್ಗಾವಣೆ ಪ್ರಕ್ರಿಯೆಯು ಕೈಗೊಳ್ಳಬೇಕಾಗಿರುತ್ತದೆ ಆದರೆ 2024 ನೇ ಸಾಲಿನಲ್ಲಿ ಭಾರತ ಸರ್ಕಾರವು 2024 ರ ಲೋಕಸಭಾ ಚುನಾವಣೆ ಪ್ರಕ್ರಿಯೆ ಚಾಲನೆಯಲ್ಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವರ್ಗಾವಣೆ ಪ್ರಕ್ರಿಯೆಗಳು ಇಲಾಖೆಯಲ್ಲಿ ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಸರ್ವ ವೃಂದಗಳ ಸಂಘ, ಆರೋಗ್ಯ ಇಲಾಖೆಯ ಎಲ್ಲಾ ಸಂಘದ ಪದಾಧಿಕಾರಿಗಳು ಪ್ರಾರಂಭಿಸಲು ಒತ್ತಾಯಿಸುತ್ತಿರುತ್ತಾರೆ. 2020 ನೇ ಸಾಲಿನಲ್ಲಿ ಕೋವಿಡ್-19 ರೋಗ 2020, 2021, 2022 ಮತ್ತು 2023 ಈ ಎಲ್ಲಾ ವರ್ಷಗಳಲ್ಲಿ ಸಮಾಲೋಚನೆ ವರ್ಗಾವಣೆ ಪ್ರಕ್ರಿಯೆಗಳು ನಡೆದಿರುವುದಿಲ್ಲ, ಈ ಹಿನ್ನೆಲೆಯಲ್ಲಿ ಇಲಾಖೆಯ ಎಲ್ಲಾ ವೃಂದದ ಅಧಿಕಾರಿಗಳು ಸಮಾಲೋಚನೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವಂತೆ ಒತ್ತಾಯಿಸುತ್ತಿರುವುದರಿಂದ 2024-25 ನೇ ಸಾಲಿನಲ್ಲಿ ಗ್ರೂಪ್ ‘ಎ’ ಗ್ರೂಪ್ ‘ಬಿ’, ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ವರ್ಗದ ಅಧಿಕಾರಿ/ನೌಕರರಿಗೆ ವೃಂದ ಬಲದ ಮೀರದಂತೆ ಸಮಾಲೋಚನೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಈ ಕೆಳಗಿನ ಮಾರ್ಗಸೂಚಿಗಳನ್ನಯ ಅನುಮತಿ ನೀಡಲು ಕೋರಿದೆ. ಕೆಳಕಂಡ ಅಂಶಗಳಿಗೆ ಅನುಮತಿ ನೀಡಲು ಕೋರಿದೆ. i. ಸರ್ಕಾರದ ಆದೇಶ ಸಂಖ್ಯೆ: ಆಕುಕ 543 ಹೆಚ್ಎಸ್ಹೆಚ್ 2018 ದಿನಾಂಕ: 29.05.2021 ರನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ 19 ಜಿಲ್ಲಾ ಆಸ್ಪತ್ರೆ /ಜಿಲ್ಲಾ ಮಟ್ಟದ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಕ್ರಮವಾಗಿ ತಲಾ 06 ಮತ್ತು 04 ರಂತೆ ತುರ್ತುಚಿಕಿತ್ಸಾ ವೈದ್ಯಾಧಿಕಾರಿಗಳೆಂದು ಮರುಪದನಾಮೀಕರಿಸಿ ಹಂಚಿಕೆ ಮಾಡಿ ಆದೇಶಿಸಲಾಗಿದೆ. 2021 ರಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳೆಂದು ಮರು ಪದನಾಮೀಕರಣಗೊಂಡಿರುವುದರಿಂದ ವರ್ಗಾವಣೆ ಕಾಯ್ದೆಯಲ್ಲಿ ಈ ಹುದ್ದೆಗಳು ಉಲ್ಲೇಖಗೊಂಡಿರುವುದಿಲ್ಲ. ಪ್ರಸ್ತುತ ಖಾಲಿ ಇರುವ ಈ ಹುದ್ದೆಗಳಿಗೆ ಕೋರಿಕೆ ವರ್ಗಾವಣೆಗಿಂತ ಮೊದಲು (ಶೇಕಡಾ 15% ರಷ್ಟು ವರ್ಗಾವಣೆಯಿಂದ ಇದನ್ನು ಹೊರತುಪಡಿಸಿ) ಸಮಾಲೋಚನೆ ನಡೆಸಲು ಅನುಮತಿ ನೀಡಲು ಕೋರಿದೆ. .ii. ವೈದ್ಯರು ಹಾಗೂ ಇತರೇ ಸಿಬ್ಬಂದಿಗಳು ಸಂಬಂಧಪಟ್ಟ ನೇಮಕಾತಿ ನಿಯಮದಲ್ಲಿರುವಂತೆ ನಿಗಧಿತ ಅವಧಿಯ ಕಡ್ಡಾಯ ಗ್ರಾಮೀಣ ಸೇವೆಯನ್ನು ಸಲ್ಲಿಸದೇ ಇದ್ದಲ್ಲಿ ಅಂತಹ ವೈದ್ಯರು/ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಕ್ಕೆ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಅನುಮತಿ ನೀಡಲು ಕೋರಿದೆ. ತಜ್ಞತೆವಾರು ಗುರುತಿಸಿರುವ ಹುದ್ದೆಗಳಲ್ಲಿ ವೈದ್ಯರುಗಳು ಅವರ ತಜ್ಞತೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸದೇ ಬೇರೆ ತಜ್ಞತೆ (CMO) ಇತರೆ ಹುದ್ದೆಯಲ್ಲಿ ಕಾರ್ಯ , (Specialist Designated Postings (Missmatch) ០៩ ថ ವೈದ್ಯರುಗಳನ್ನು ಅವರ ತಜ್ಞತೆಗೆ ಅನುಗುಣವಾಗಿ ಖಾಲಿ ಇರುವ ಹುದ್ದೆಗಳಿಗೆ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಅನುಮತಿ ನೀಡಲು ಕೋರಿದೆ. iv. ವಿವಿಧ ವೃಂದಗಳಲ್ಲಿ ವರ್ಗಾವಣೆಗಳಿಗೆ ಸಲ್ಲಿಸಿದ ಅಧಿಕಾರಿ/ನೌಕರರುಗಳನ್ನು ವರ್ಗಾವಣೆಗೆ ಪರಿಗಣಿಸಿ ನಿಯಮಾನುಸಾರ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಅನುಮತಿ ನೀಡಲು ಕೋರಿದೆ. V. 2015-16, 2016-17 ನೇ ಸಾಲಿನ ವರ್ಗಾವಣೆ ಸಮಯದಲ್ಲಿ ಸರ್ಕಾರವು 10 ವರ್ಷಗಳಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ‘ಎ’ ವೃಂದದ ತಜ್ಞರು/ವೈದ್ಯಾಧಿಕಾರಿಗಳು, ‘ಬಿ’ ವೃಂದ ಮತ್ತು ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳನ್ನು ಖಾಲಿ ಹುದ್ದೆಗಳೆಂದು ಪ್ರಕಟಿಸಿ (ದೀರ್ಘಕಾಯಿಲೆಯಿಂದ ಬಳಲುತ್ತಿರುವ ಅಧಿಕಾರಿ/ ಸಿಬ್ಬಂದಿ ಮತ್ತು ವಯೋ ನಿವೃತ್ತಿ ಹೊಂದಲು 2 ವರ್ಷ ಸೇವೆ ಬಾಕಿ ಇರುವವರನ್ನು ಹೊರತುಪಡಿಸಿ) ಸಮಾಲೋಚನೆ ಮುಖಾಂತರ ಈ ಸ್ಥಳಗಳನ್ನು ಭರ್ತಿ ಮಾಡಲು ಹಾಗೂ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಹಾಜರಾದ ಬಳಿಕ ಕರ್ತವ್ಯದಿಂದ ಬಿಡುಗಡೆ ಹೊಂದಿದ ತಜ್ಞರು/ವೈದ್ಯಾಧಿಕಾರಿಗಳು, ‘ಬಿ’ ವೃಂದ, ‘ಸಿ’ ಮತ್ತು ‘ಡಿ’ ವೃಂದ ನೌಕರರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಆಯುಕ್ತಾಲಯದಲ್ಲಿ ವರದಿ ಮಾಡಿಕೊಂಡ ನಂತರ ಅವರುಗಳಿಗೆ ಸಮಾಲೋಚನೆ ಮುಖಾಂತರ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ ಸರ್ಕಾರ ಅನುಮತಿ ನೀಡಿದ್ದು, ಇದೇ ರೀತಿಯ ಕ್ರಮವನ್ನು 2024-25 ನೇ ಸಾಲಿನಲ್ಲಿ ಅಳವಡಿಸಿಕೊಳ್ಳಲು ಅನುಮತಿ ನೀಡಲು ಕೋರಿದೆ. ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳನ್ನಯ, ಸಮಾಲೋಚನೆಗೆ ನಿಯಮಾನುಸಾರ ಅಗತ್ಯ ವರ್ಗಾವಣೆ ಮಾಹಿತಿ ಕ್ರೋಢೀಕರಿಸಲು, ಪರಿಶೀಲನಾ ಕಾರ್ಯ ಕೈಗೊಳ್ಳಲು ಹಾಗೂ ಮುಂದಿನ ಕ್ರಮವಹಿಸಲು ಈ ಕೆಳಕಂಡಂತೆ ತಾತ್ಕಾಲಿಕ ವರ್ಗಾವಣಾ ವೇಳಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.