ಜೂನ್ 14ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಅನಿರುದ್ಧ್ ಜತ್ಕರ್ ಅಭಿನಯದ ಬಹುನಿರೀಕ್ಷಿತ ‘ಚೆಫ್ ಚಿದಂಬರ’ ಚಿತ್ರದ ಟ್ರೈಲರ್ ಇದೇ ಜೂನ್ ಒಂದಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಆನಂದ್ ರಾಜ್ ನಿರ್ದೇಶನದ ಈ ಚಿತ್ರವನ್ನು ದಮ್ಟಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರೂಪಾ ಡಿ ಎನ್ ನಿರ್ಮಾಣ ಮಾಡಿದ್ದು, ಅನಿರುದ್ಧ್ ಜತ್ಕರ್, ನಿಧಿ ಸುಬ್ಬಯ್ಯ ಮತ್ತು ರೆಚೆಲ್ ಡೇವಿಡ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ವಿಜೇತ್ ಚಂದ್ರ ಸಂಕಲನ, ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ, ಗಣೇಶ್ ಪರಶುರಾಮ್ ಸಂಭಾಷಣೆ, ಉದಯ್ ಲೀಲಾ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ ಮತ್ತು ಡಿ.ಐ. ನರಸಿಂಹಮೂರ್ತಿ ಸಾಹಸ ನಿರ್ದೇಶನವಿದೆ. ರಿತ್ವಿಕ್ ಮುರುಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ.