alex Certify ವೀರ ಸಾವರ್ಕರ್ ಸೇತುವೆ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣ; ಇದು ರಾಷ್ಟ್ರ ಭಕ್ತರನ್ನು ಅಪಮಾನಿಸುವ ದೇಶ ವಿದ್ರೋಹಿಗಳನ್ನು ರಕ್ಷಿಸುವ ಕಾಂಗ್ರೆಸ್ ಸಂಸ್ಕೃತಿಗೆ ಕನ್ನಡಿ ಎಂದು ವಿಜಯೇಂದ್ರ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀರ ಸಾವರ್ಕರ್ ಸೇತುವೆ ನಾಮಫಲಕಕ್ಕೆ ಮಸಿ ಬಳಿದ ಪ್ರಕರಣ; ಇದು ರಾಷ್ಟ್ರ ಭಕ್ತರನ್ನು ಅಪಮಾನಿಸುವ ದೇಶ ವಿದ್ರೋಹಿಗಳನ್ನು ರಕ್ಷಿಸುವ ಕಾಂಗ್ರೆಸ್ ಸಂಸ್ಕೃತಿಗೆ ಕನ್ನಡಿ ಎಂದು ವಿಜಯೇಂದ್ರ ಕಿಡಿ

ಬೆಂಗಳೂರು: ಬೆಂಗಳೂರಿನ ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಹಾಗೂ ಭಾವಚಿತ್ರಕ್ಕೆ ಎನ್ ಎಸ್ ಯು ಐ ಕಾರ್ಯಕರ್ತರು ಮಸಿ ಬಳಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಒಬ್ಬ ರಾಷ್ಟ್ರಭಕ್ತನನ್ನು ಅಪಮಾನಿಸಲು ಮತ್ತೊಬ್ಬ ರಾಷ್ಟ್ರಭಕ್ತನ ಭಾವಚಿತ್ರವನ್ನು ಗುರಾಣಿಯಂತೆ ಬಳಸಿಕೊಂಡು ಯಲಹಂಕದ ವೀರ್ ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಎನ್.ಎಸ್.ಯು.ಐ ಕಿಡಿಗೇಡಿಗಳು ಮಸಿಬಳಿದು ಅಪಮಾನ ಮಾಡಿ ವಿಕೃತಿ ಮೆರೆದಿರುವ ಘಟನೆ ಅತ್ಯಂತ ಖಂಡನೀಯ. ರಾಷ್ಟ್ರ ಭಕ್ತರನ್ನು ಅಪಮಾನಿಸುವ ದೇಶ ವಿದ್ರೋಹಿಗಳನ್ನು ರಕ್ಷಿಸುವ ಕಾಂಗ್ರೆಸ್ ಸಂಸ್ಕೃತಿಗೆ ಈ ಘಟನೆ ಕನ್ನಡಿ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶವನ್ನು ಮರೆಮಾಚಿಕೊಳ್ಳುವ ಉದ್ದೇಶದಿಂದ ಕೆಲ ಕಿಡಿಗೇಡಿ ಯುವಕರನ್ನು ಈ ರೀತಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಲು ಛೂ ಬಿಟ್ಟಿರುವುದು ಈ ನಾಡಿನ ದುರ್ದೈವವಾಗಿದೆ.

ಸಾರ್ವಕರ್ ಅವರನ್ನು ಅಪಮಾನಿಸುವ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರ ಪ್ರದರ್ಶಿಸಿರುವ ಕಿಡಿಗೇಡಿಗಳು ಇಬ್ಬರೂ ರಾಷ್ಟ್ರಭಕ್ತರನ್ನು ಏಕಕಾಲದಲ್ಲಿ
ಅಪಮಾನಿಸಿದ್ದಾರೆ. ಈ ಕೂಡಲೇ ವೀರ ಸಾವರ್ಕರ್ ಅವರನ್ನು ಅಪಮಾನಿಸಿರುವ ಎಲ್ಲರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಖು ಎಂದು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...