ಬೆಂಗಳೂರು: ರಾಜ್ಯದ ಹಲವೆಡೆಗಳಿಂದ ಕೆ.ಎಸ್.ಆರ್.ಬೆಂಗಳೂರಿಗೆ ಬರುವ ಬಹುತೇಕ ರೈಲುಗಳು ಈದಿನ ರದ್ದಾಗಲಿವೆ.
ಈ ಬಗ್ಗೆ ನೈಋತ್ಯ ರೈಲ್ವೆ ವಲಯ ಮತ್ತು ಕೊಂಕಣ ರೈಲ್ವೆ ವಲಯ ಮಾಹಿತಿ ನೀಡಿದೆ. ಬೈಯ್ಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ ಹಾಗೂ ಬೈಯಪ್ಪನಹಳ್ಳಿ- ಸ್ರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಾರ್ಷಿಕ ಕೇಬಲ್ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ಇಂದು ಮೇ 29ರಂದು ಮೂರು ಮೆಮೋ ರೈಲುಗಳು ರದ್ದಾಗಲಿವೆ. ಹಾಗೂ 8 ಮೆಮು ರೈಲುಗಳು ಬಹುತೇಕ ರದ್ದಾಗಲಿವೆ.
ಇನ್ನು ಭಟ್ಕಳ ವಿಮಾನ ನಿಲ್ದಾಣದಲ್ಲಿ ಸುರಕ್ಷತೆ ಸಂಬಂಧಿತ ಕಾಮಗಾರಿ ಹಿನ್ನೆಲೆಯಲ್ಲಿ ಮೇ 29ರಿಂದ 31ವರೆಗೆ ಕೆಲ ರೈಲುಗಳು ರದ್ದಾಗಲಿವೆ.
ರದ್ದಾಗುವ ರೈಲುಗಳು:
3 ವಿಶೇಷ ಮೆಮು ರೈಲು:
ರೈಲು ಸಂಖ್ಯೆ (01766) ವೈಟ್ಫಿಲ್ಡ್-ಕೆಎಸ್ಆರ್ ಬೆಂಗಳೂರು ವಿಶೇಷ ಮೆಮು ರೈಲು, ಕೆಎಸ್ಆರ್ ಬೆಂಗಳೂರು -ಬಂಗಾರಪೇಟ (06561) ಮತ್ತು ಬಂಗಾರಪೇಟ-ಕೆಎಸ್ಆರ್ ಬೆಂಗಳೂರು (01773) ವಿಶೇಷ ಮೆಮು ರೈಲು ಬುಧವಾರ (ಮೇ 29) ತಾತ್ಕಾಲಿಕವಾಗಿ ರದ್ದಾಗಿವೆ.
8 ವಿಶೇಷ ಮೆಮು:
ರೈಲು ಸಂಖ್ಯೆ (06389) ಕೆಎಸ್ಆರ್ ಬೆಂಗಳೂರು-ಬಂಗಾರಪೇಟ ಮೆಮು ವಿಶೇಷ ರೈಲು ಕೆಎಸ್ಆರ್ ಬೆಂಗಳೂರು-ವೈಟ್ಫಿಲ್ಡ್ ನಡುವೆ ಭಾಗಶಃ ರದ್ದು
ರೈಲು ಸಂಖ್ಯೆ (06535) ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ರೈಲು ಯಲಹಂಕ-ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದು
ರೈಲು ಸಂಖ್ಯೆ (01776) ಮರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಕೆಎಸ್ಆರ್ ಬೆಂಗಳೂರು-ಕೃಷ್ಣರಾಜಪುರಂ ಮಧ್ಯೆ ಭಾಗಶಃ ರದ್ದು
ರೈಲು ಸಂಖ್ಯೆ (01775) ಕೆಎಸ್ಆರ್ ಬೆಂಗಳೂರು-ಮರಿಕುಪ್ಪಂ ಮೆಮು ವಿಶೇಷ ರೈಲು ಕೆಎಸ್ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದು
ರೈಲು ಸಂಖ್ಯೆ (01793) ಮರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಬಂಗಾರಪೇಟ-ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದು
ರೈಲು ಸಂಖ್ಯೆ (01794) ಕೃಷ್ಣರಾಜಪುರಂ-ಮರಿಕುರಪ್ಪಂ ಮೆಮು ವಿಶೇಷ ರೈಲು ಕೃಷ್ಣರಾಜಪುರಂ-ಬಂಗಾರಪೇಟ ನಡುವೆ ಭಾಗಶಃ ರದ್ದು
ರೈಲು ಸಂಖ್ಯೆ (06529) ಕೆಎಸ್ಆರ್ ಬೆಂಗಳೂರು-ಕುಪ್ಪಂ ಮೆಮು ವಿಶೇಷ ರೈಲು ಕೆಎಸ್ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಗಶಃ ರದ್ದು