alex Certify ಲಿವರ್‌ ಡ್ಯಾಮೇಜ್‌ ಆದಾಗ ಕಾಣಿಸಿಕೊಳ್ಳುತ್ತವೆ ಈ ಚಿಹ್ನೆಗಳು; ತಕ್ಷಣ ಮಾಡಿಸಿಕೊಳ್ಳಿ ಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿವರ್‌ ಡ್ಯಾಮೇಜ್‌ ಆದಾಗ ಕಾಣಿಸಿಕೊಳ್ಳುತ್ತವೆ ಈ ಚಿಹ್ನೆಗಳು; ತಕ್ಷಣ ಮಾಡಿಸಿಕೊಳ್ಳಿ ಪರೀಕ್ಷೆ

ಯಕೃತ್ತು ಅಥವಾ ಲಿವರ್‌ ದೇಹದ ಪ್ರಮುಖ ಭಾಗ. ಅದರ ಪ್ರಾಮುಖ್ಯತೆ ಬಹುತೇಕರಿಗೆ ತಿಳಿದಿಲ್ಲ. ಯಕೃತ್ತು ದೇಹದಲ್ಲಿ 500ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ. ಇದು ವಿಷವನ್ನು ಫಿಲ್ಟರ್ ಮಾಡುವ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಮತ್ತು ಪ್ರೋಟೀನ್‌ಗಳನ್ನು ತಯಾರಿಸುವ ಜವಾಬ್ದಾರಿಯನ್ನು ಒಳಗೊಂಡಿದೆ.

ನಿರಂತರ ಕಳಪೆ ಆಹಾರ ಮತ್ತು ಅನಾರೋಗ್ಯಕ್ಕೆ ನಾವು ಸೇವಿಸುವ ಹೆಚ್ಚಿನ ಪ್ರಮಾಣದ ಔಷಧಿಗಳು ಯಕೃತ್ತಿಗೆ ಹಾನಿ ಉಂಟುಮಾಡುತ್ತವೆ. ಲಿವರ್‌ಗೆ ಹಾನಿಯಾಗಿರುವುದರ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು ಕಷ್ಟ. ಆದರೆ ಇದರಿಂದ ದೇಹದಲ್ಲಿ ಕೆಲವು ಬದಲಾವಣೆಗಳು ಪ್ರಾರಂಭವಾಗುತ್ತವೆ,ಅದನ್ನು ಗಮನಿಸಬೇಕು.

ಲಿವರ್‌ ಸಮಸ್ಯೆಯ ಆರಂಭಿಕ ಚಿಹ್ನೆಗಳು…

ಸುಸ್ತು

ಸಾಮಾನ್ಯ ವಿಶ್ರಾಂತಿಯ ನಂತರವೂ ಅತಿಯಾದ ಆಯಾಸವಾಗುತ್ತಿದ್ದರೆ ಅದು ಲಿವರ್‌ ಹಾನಿಯ ಸಂಕೇತವಾಗಿರಬಹುದು. ಯಕೃತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ ಇದು ಸಂಭವಿಸುತ್ತದೆ.

ಹಸಿವಿನ ನಷ್ಟ

ಆರೋಗ್ಯಕರವಾಗಿ ತಿನ್ನುತ್ತಿದ್ದರೂ ಸಹ, ಹಸಿವಿನ ಕೊರತೆ ಅಥವಾ ತೂಕ ನಷ್ಟವು ಯಕೃತ್ತಿನ ಸಮಸ್ಯೆಗಳ ಸಂಕೇತವಾಗಿರುತ್ತದೆ. ಲಿವರ್‌,  ಆಹಾರದಿಂದ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗದ ಕಾರಣ ಇದು ಸಂಭವಿಸುತ್ತದೆ.

ಹೊಟ್ಟೆ ನೋವು

ಹೊಟ್ಟೆಯ ಮೇಲಿನ ಬಲ ಭಾಗದಲ್ಲಿ ನೋವು ಅಥವಾ ಅಸ್ವಸ್ಥತೆಯಿದ್ದರೆ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು. ಈ ನೋವು ಮೊನಚಾಗಿರಬಹುದು ಅಥವಾ ಕಡಿಮೆ ಇರಬಹುದು. ಕೆಲವೊಮ್ಮೆ ಭುಜದಲ್ಲೂ ಈ ನೋವು ಹರಡುತ್ತದೆ.

ಚರ್ಮ ಮತ್ತು ಕಣ್ಣುಗಳ ಬಣ್ಣ ಹಳದಿಯಾಗುವುದು

ಚರ್ಮ ಮತ್ತು ಕಣ್ಣುಗಳ ಬಿಳಿಭಾಗವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ಇದು ಲಿವರ್‌ ಡ್ಯಾಮೇಜ್‌ನ ಪ್ರಮುಖ ಲಕ್ಷಣವಾಗಿದೆ. ಬಿಲಿರುಬಿನ್ ಎಂಬ ವಸ್ತುವಿನ ಮಟ್ಟವು ರಕ್ತದಲ್ಲಿ ಹೆಚ್ಚಾದಾಗ ಇದು ಸಂಭವಿಸುತ್ತದೆ.

ಗಾಢ ಮೂತ್ರ

ಮೂತ್ರವು ಗಾಢ ಬಣ್ಣಕ್ಕೆ ತಿರುಗಿದರೆ ಅದು ಕೂಡ ಯಕೃತ್ತಿನ ಹಾನಿಯ ಸಂಕೇತವಾಗಿರಬಹುದು. ಆದರೆ ನಿರ್ಜಲೀಕರಣದಿಂದಾಗಿ ಕೂಡ ಮೂತ್ರದ ಬಣ್ಣ ಬದಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಮೂತ್ರವು ನೀರಿನಂತೆ ಸ್ಪಷ್ಟವಾಗದಿದ್ದರೆ ಅದು ಯಕೃತ್ತಿನ ಸಮಸ್ಯೆಯ ಸಂಕೇತವಾಗಿದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...