ಭವಿಷ್ಯದಲ್ಲಿ ಏನಾಗಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಸಹಜ. ಕೇವಲ ಭಾರತ ಮಾತ್ರವಲ್ಲ ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಜ್ಯೋತಿಷಿಗಳು ಮತ್ತು ಭವಿಷ್ಯ ಹೇಳುವವರಿಗೆ ಯಾವಾಗಲೂ ಬೇಡಿಕೆ ಹೆಚ್ಚಾಗಿರುತ್ತದೆ. ತಮ್ಮ ಭವಿಷ್ಯವಾಣಿಯಿಂದಲೇ ಹೆಸರಾಗಿರುವ ಬಾಬಾ ವಂಗಾ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಬಾಬಾ ವಂಗಾ ಭವಿಷ್ಯವಾಣಿ ನಿಜವಾಗುತ್ತೆ ಎಂಬ ನಂಬಿಕೆಯಿದೆ. ಈ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ಕೂಡ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಜಗತ್ತು ಯಾವಾಗ ಕೊನೆಗೊಳ್ಳುತ್ತದೆ?
ಬಾಬಾ ವಂಗಾ ತಮ್ಮ ಮರಣಕ್ಕೂ ಮೊದಲು ಸಾಕಷ್ಟು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಈ ಸಂದರ್ಭದಲ್ಲಿಯೇ ಈ ಪ್ರಪಂಚ ಯಾವಾಗ ಅಂತ್ಯವಾಗುತ್ತದೆ ಎಂಬುದನ್ನೂ ಅವರು ಹೇಳಿದ್ದರು. ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ ಪ್ರಪಂಚವು 5079ರಲ್ಲಿ ಕೊನೆಗೊಳ್ಳುತ್ತದೆ.
2024ರಲ್ಲಿ ಏನು ನಡೆಯುತ್ತದೆ ಎಂಬುದನ್ನೂ ಬಾಬಾ ವಂಗಾ ಹೇಳಿದ್ದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆ ಪ್ರಯತ್ನ ಸ್ವದೇಶೀಯನಿಂದಲೇ ನಡೆಯುತ್ತದೆ ಎಂಬುದನ್ನು ಬಾಬಾ ವಂಗಾ ಮೊದಲೇ ಹೇಳಿದ್ದರು. ಪುಟಿನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಪ್ರಿಗೋಜಿನ್ ಕೂಡ ಸಾವನ್ನಪ್ಪಿದ್ದಾರೆ. ಉಕ್ರೇನ್‌ನಲ್ಲಿನ ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು ಮತ್ತು ಅಮೆರಿಕದಲ್ಲಿ 9/11 ದಾಳಿಯನ್ನು ನಿಖರವಾಗಿ ಆತ ಊಹಿಸಿದ್ದರು.
ಅವರು 2024ರ ಕುರಿತಂತೆ ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿಗಳು ಕೂಡ ನಿಜವೆಂದು ಸಾಬೀತಾಗುತ್ತಿವೆ. 2024ರಲ್ಲಿ ಯುರೋಪಿನಲ್ಲಿ ಹಲವು ಭಯೋತ್ಪಾದಕ ದಾಳಿಗಳು ನಡೆಯಲಿವೆ ಎಂದು ಬಾಬಾ ವೆಂಗಾ ಹೇಳಿದ್ದರು. ರಷ್ಯಾದ ಮಾಸ್ಕೋದಲ್ಲಿ ಇತ್ತೀಚೆಗೆ ಭಯೋತ್ಪಾದಕ ದಾಳಿ ನಡೆದಿತ್ತು.
ರಷ್ಯಾ ಪ್ರತೀಕಾರ ತೀರಿಸಿಕೊಳ್ಳಲು ಹೊರಟರೆ ಇದು ಉಗ್ರ ಸ್ವರೂಪ ಪಡೆಯಲಿದೆ. ಉಕ್ರೇನ್‌ನ ಆಚೆಗೆ ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಇದು ಯುರೋಪಿನಲ್ಲಿ ಯುದ್ಧವನ್ನು ಹರಡುತ್ತದೆ. ಸೈಬರ್ ದಾಳಿ ಹೆಚ್ಚಾಗಲಿದೆ ಎಂಬುದನ್ನೂ ಬಾಬಾ ವೆಂಗಾ ಹೇಳಿದ್ದರು. ಅದೇ ರೀತಿ ಪ್ರಪಂಚದಾದ್ಯಂತ ಸೈಬರ್ ದಾಳಿ ಹೆಚ್ಚಾಗಿದೆ. 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಂಗಾ, 1996 ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು.