ನಾನು ಹೈದರಾಬಾದ್ ನಲ್ಲಿಯೇ ಇದ್ದೇನೆ; ರೇವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ ಖ್ಯಾತ ನಟಿ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಪಾರ್ಟಿ ಆಯೋಜಕರು ಸೇರಿ ಐವರನ್ನು ಬಂಧಿಸಲಾಗಿದೆ. ರಾಜಕಾರಣಿಗಳು, ತೆಲುಗು ಚಿತ್ರರಂಗದ ನಟ-ನಟಿಯರು ಈ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಮಾತು ಕೇಳಿಬರುತ್ತಿದೆ. ಪ್ರಮುಖವಾಗಿ ಟಾಲಿವುಡ್ ನಟಿ ಹೇಮಾ ಕೂಡ ಇದ್ದರು ಎನ್ನಲಾಗಿದೆ.

ಆದರೆ ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ತಾನು ಭಾಗಿಯಾಗಿಲ್ಲ. ನಾನು ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿಯೇ ಇದ್ದೇನೆ ಎಂದು ಸಾಮಾಜಿಕ ಜಾಲತಾಣಗಲಲ್ಲಿ ವಿಡಿಯೋ ಶೇರ್ ಮಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಾನು ಎಲ್ಲಿಯೂ ಹೋಗಿಲ್ಲ. ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿ ಆರಾಮವಾಗಿದ್ದೇನೆ. ರೇವ್ ಪಾರ್ಟಿಯಲ್ಲಿ ನಾನು ಭಾಗಿಯಾಗಿದ್ದೇನೆ ಎಂಬ ಸುದ್ದಿ ಫೇಕ್ ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಆರ್ ಫಾರ್ಮ್ ಹೌಸ್ ನಲ್ಲಿ ಹುಟ್ಟುಹಬ್ಬದ ಹೆಸರಲ್ಲಿ ರೇವ್ ಪಾರ್ಟಿ ನಡೆದಿತ್ತು. ಸಿಸಿಬಿ ದಾಳಿ ವೇಳೆ 17 ಎಂಡಿಎಂ ಮಾತ್ರೆಗಳು, ಕೊಕೇನ್ ಸೇರಿದಂತೆ 40 ಕೆಜಿಗೂ ಅಧಿಕ ಡ್ರಗ್ಸ್ ಪತ್ತೆಯಾಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read