ಮುಂಬೈ: ನಾಸಿಕ್ ನ ಪಂಚವಟಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಲಗೇಜ್ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ಗುರುವಾರ ಪರಿಶೀಲಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಶಿಂಧೆ ಅವರು ಹಣ ತುಂಬಿದ ಬ್ಯಾಗ್‌ಗಳನ್ನು ನಾಸಿಕ್ ಗೆ ಕೊಂಡೊಯ್ದಿದ್ದಾರೆ ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವುತ್ ಸೋಮವಾರ ಆರೋಪಿಸಿದ ನಂತರ ಈ ಬೆಳವಣಿಗೆ ನಡೆದಿದೆ. ರಾವುತ್ ಅವರು X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಶಿಂಧೆ ಅವರು ನಾಸಿಕ್ ನಲ್ಲಿ ಹೆಲಿಕಾಪ್ಟರ್‌ನಿಂದ ಹೊರಬರುತ್ತಿದ್ದಾರೆ ಮತ್ತು ಅವರ ಸುತ್ತಲಿನ ಕೆಲವು ವ್ಯಕ್ತಿಗಳು ದೊಡ್ಡ ಚೀಲಗಳನ್ನು ಹೊತ್ತೊಯ್ಯುತ್ತಿದ್ದರು ಎಂದು ತಿಳಿಸಿದ್ದಾರೆ.
ಗುರುವಾರ ನಾಸಿಕ್ ಗೆ ಆಗಮಿಸಿದ ನಂತರ ಶಿಂಧೆ ಅವರು ನಾಸಿಕ್ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಹೆಚ್ಚಿನ ಅಂತರದಲ್ಲಿ ತಮ್ಮ ಪಕ್ಷ ಉಳಿಸಿಕೊಳ್ಳಲಿದೆ ಎಂದು ಹೇಳಿದರು.
2019 ರಲ್ಲಿ ರಾಜ್ಯ ಸಚಿವ ಛಗನ್ ಭುಜಬಲ್ ಅವರ ಸೋದರಳಿಯ ಎನ್‌ಸಿಪಿಯ ಸಮೀರ್ ಭುಜಬಲ್ ಅವರನ್ನು ಸುಮಾರು 3 ಲಕ್ಷ ಮತಗಳ ಅಂತರದಿಂದ ಸೋಲಿಸಿದ ಶಿವಸೇನಾ ಅಭ್ಯರ್ಥಿ ಮತ್ತು ಹಾಲಿ ಸಂಸದ ಹೇಮಂತ್ ಗೋಡ್ಸೆ ಪರ ಪ್ರಚಾರ ಮಾಡಲು ಶಿಂಧೆ ಇಲ್ಲಿಗೆ ಬಂದಿದ್ದರು.