ಮೇ 31ರಂದು ನಡೆಯಲಿದೆ ಎಡವಟ್ಟು ಕಾರಣ ರದ್ದಾಗಿದ್ದ ಸಮಾಜಶಾಸ್ತ್ರ ಪರೀಕ್ಷೆ

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿಎ ಮೂರನೇ ಸೆಮಿಸ್ಟರ್ ಸಮಾಜಶಾಸ್ತ್ರ ವಿಷಯದ ಪರೀಕ್ಷೆ ಮೇ 31ರಂದು ನಡೆಯಲಿದೆ.

ಬಿಎ ಮೂರನೇ ಸೆಮಿಸ್ಟರ್ ಸಮಾಜಶಾಸ್ತ್ರ ವಿಷಯದ ಪರೀಕ್ಷೆಗೆ ಒಂದನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ವಿತರಿಸಿದ ಪರಿಣಾಮ ರದ್ದಾಗಿದ್ದ ಪರೀಕ್ಷೆಯನ್ನು 31 ರಂದು ನಡೆಸಲು ವಿವಿ ನಿರ್ಧರಿಸಿದೆ. ವಿವಿ ಪರೀಕ್ಷಾ ವಿಭಾಗದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸುವ ವೇಳೆ ಎಡವಟ್ಟಾಗಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ದಿನ ಸಮಸ್ಯೆ ಎದುರಿಸುವಂತಾಗಿತ್ತು.

ಪ್ರಶ್ನೆಪತ್ರಿಕೆಯ ಸಂಕೇತ ಸರಿಯಾಗಿತ್ತು. ಆದರೆ, ಪತ್ರಿಕೆಯಲ್ಲಿ ಒಂದನೇ ಸೆಮಿಸ್ಟರ್ ನ ಪ್ರಶ್ನೆಗಳನ್ನು ಮುದ್ರಿಸಲಾಗಿತ್ತು. ಇದರಿಂದಾಗಿ ಗೊಂದಲಕ್ಕೆ ಒಳಗಾದ ವಿದ್ಯಾರ್ಥಿಗಳು ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ತಂದಿದ್ದರು. ಬಳಿಕ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಇದೀಗ ರದ್ದಾದ ಪರೀಕ್ಷೆ ಮೇ 31ರಂದು ನಡೆಸಲು ತೀರ್ಮಾನಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read