ಭಾರತದಲ್ಲಿ ಲೋಕಲ್ ಟ್ರೈನ್ ಹತ್ತುವುದು ದೊಡ್ಡ ಸಾಹಸ. ಸದಾಕಾಲ ಪ್ರಯಾಣಿಕರಿಂದ ತುಂಬಿಹೋಗಿರುವ ಇಂತಹ ರೈಲುಗಳಲ್ಲಿ ಪ್ರಯಾಣಿಸುವುದು ತ್ರಾಸದ ಕೆಲಸ . ಇದಕ್ಕೆ ನಿದರ್ಶನವೆಂಬಂತೆ ಮಹಾರಾಷ್ಟ್ರದ ಥಾಣೆಯಲ್ಲಿ ಸ್ಥಳೀಯ ರೈಲಿನಲ್ಲಿ ಹತ್ತಲು ಪ್ರಯಾಣಿಕರು ಪರದಾಡುವ ಅವ್ಯವಸ್ಥೆಯನ್ನು ಸೆರೆಹಿಡಿಯುವ ವೀಡಿಯೊ ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ.
ರೈಲು ಹತ್ತುವ ಪ್ರಯತ್ನದಲ್ಲಿ ಮಹಿಳೆಯರು ಪರಸ್ಪರ ಜಗಳವಾಡುವುದನ್ನು ಈ ದೃಶ್ಯವು ತೋರಿಸುತ್ತದೆ. ರೈಲ್ವೆ ಅಧಿಕಾರಿಗಳ ಪರಿಣಾಮಕಾರಿ ನಿರ್ವಹಣೆಯ ಕೊರತೆಯ ಭೀಕರ ಪರಿಣಾಮಗಳನ್ನು ವಿಡಿಯೋ ಎತ್ತಿ ತೋರಿಸುತ್ತದೆ.
ಕೂಗಾಟ, ಕಿರುಚಾಟ, ಜಗಳದ ನಡುವೆ ಗಾಳಿ, ಮಳೆ, ಬಿಸಿಲೆನ್ನದೇ ಪ್ರಯಾಣಿಕರು ರೈಲು ಹತ್ತಲು ಪ್ರಯತ್ನಿಸ್ತಾರೆ. ಸೀಟ್ ಸಿಗೋದು ಬೇಡ ಕೊನೇ ಪಕ್ಷ ತಮ್ಮ ಎರಡು ಕಾಲಗಳ ಮೇಲೆ ನಿಲ್ಲಲು ಜಾಗ ಸಿಕ್ರೆ ಸಾಕು ಎಂಬಂತೆ ಪ್ರಯಾಣಿಕರನ್ನು ತಳ್ಳುತ್ತಾ, ಕಾಲ್ತುಳಿತಕ್ಕೆ ಸಿಲುಕುತ್ತಾ ಕಷ್ಟಪಟ್ಟು ಹತಾಶೆಯಿಂದ ರೈಲು ಹತ್ತುವ ಪ್ರಯತ್ನ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಕೂಡ ಅಶಿಸ್ತಿನಿಂದ ವರ್ತಿಸುವುದು ಕೂಡ ಅಲ್ಲಗಳೆಯುವ ವಿಷಯವಲ್ಲ.
ರೈಲುಗಳಲ್ಲಿ ಇಂತಹ ಅವ್ಯವಸ್ಥೆಯ ಜೊತೆಗೆ ರೈಲಿನಲ್ಲಿ ಬಡಿಸುವ ಕಡಿಮೆ ಗುಣಮಟ್ಟದ ಆಹಾರದ ಬಗ್ಗೆಯೂ ದೂರುಗಳಿವೆ. ಐಷಾರಾಮಿ ರೈಲು ಎಂದು ಕರೆಯಲ್ಪಡುವ ವಂದೇ ಭಾರತ್ ಎಕ್ಸ್ ಪ್ರೆಸ್ ಆಹಾರದಲ್ಲಿ ಹುಳು ಇದ್ದ ಬಗ್ಗೆ ಪ್ರಯಾಣಿಕರು ದೂರಿದ್ದಾರೆ.
ಜನದಟ್ಟಣೆಯಿಂದ ತಮ್ಮ ಕಾಯ್ದಿರಿಸಿದ ಆಸನಗಳನ್ನು ಪಡೆಯಲು ಪ್ರಯಾಣಿಕರು ಪರದಾಡುತ್ತಾರೆ.. ಇದಲ್ಲದೆ, ಜನಸಂದಣಿಯಿಂದ ಎಷ್ಟೋ ಪ್ರಯಾಣಿಕರು ನೆಲದ ಮೇಲೆ ಅಥವಾ ಶೌಚಾಲಯದ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ. ಈ ಬಗ್ಗೆ ಪದೇ ಪದೇ ದೂರುಗಳು ಕೇಳಿಬಂದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ