ಬೇಟೆಯಾಡಿದ ಮೀನು ತಿನ್ನಲು ಹಾವುಗಳ ತೀವ್ರ ಹೋರಾಟ; ಗಮನ ಸೆಳೆದ ವಿಡಿಯೋ

ತಾವು ಬೇಟೆಯಾಡಿದ ಮೀನನ್ನು ತಿನ್ನಲು ಎರಡು ಹಾವುಗಳು ಹೋರಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“gofishingindonesia” ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಸಾಕಷ್ಟು ಗಮನ ಸೆಳೆದಿದ್ದು ವೀಕ್ಷಕರ ಆಸಕ್ತಿಯನ್ನು ಕೆರಳಿಸಿದೆ.

ಎರಡು ಹಾವುಗಳು ಮೀನನ್ನು ತಿನ್ನಲು ಪ್ರಯತ್ನಿಸುತ್ತಾ ಅದನ್ನು ತಮ್ಮ ಬಾಯಲ್ಲಿ ಬಿಗಿಯಾಗಿ ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಹಾವುಗಳು ಮೀನನ್ನು ತಿನ್ನಲು ತೊಂದರೆ ಎದುರಿಸುತ್ತಿದ್ದು ತೀವ್ರವಾದ ಮತ್ತು ಆಕರ್ಷಕ ಹೋರಾಟ ಪ್ರದರ್ಶನ ನೀಡುತ್ತವೆ. ಈ ಹೋರಾಟ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಮೀನಿಗಾಗಿ ಹಾವುಗಳ ಪಟ್ಟುಬಿಡದ ಬೇಟೆ ಗಮನ ಸೆಳೆದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read