ಅಕ್ಷಯ ತೃತೀಯ ದಿನದಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ಅಂದೇ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ಧಾಮಗಳ ಬಾಗಿಲುಗಳನ್ನು ತೆರೆಯಲಾಗಿತ್ತು. ಇಂದು ಬದರಿನಾಥ ದೇಗುಲದ ಬಾಗಿಲನ್ನು ತೆರೆಯಲಾಗಿದೆ.
ಬೆಳಗ್ಗೆ 6 ಗಂಟೆಗೆ ದೇಗುಲದ ಬಾಗಿಲು ತೆರೆದು ವೇದಘೋಷ ಮೊಳಗಿಸಿದ್ದು, ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಭಕ್ತರು ಸಹ ‘ಬದರಿ ವಿಶಾಲ್ ಲಾಲ್ ಕೀ ಜೈ’ ಎಂಬ ಘೋಷಣೆಯನ್ನು ಹಾಕಿದ್ದಾರೆ. ಭಕ್ತರ ಸಂದರ್ಶನದ ಹಿನ್ನೆಲೆಯಲ್ಲಿ ದೇಗುಲವನ್ನು ಹೂವುಗಳಿಂದ ಅಲಂಕರಿಸಲಾಗಿದೆ.
ಚಾರ್ ಧಾಮ್ ಯಾತ್ರೆ ಹಿಂದೂ ಧರ್ಮದಲ್ಲಿ ಪ್ರಮುಖ ತೀರ್ಥಯಾತ್ರೆಯಾಗಿದ್ದು, ಚಳಿಗಾಲದ ಆರಂಭದ ಸಂದರ್ಭದಲ್ಲಿ ನವೆಂಬರ್ 18ರಂದು ಅಂದರೆ ಆರು ತಿಂಗಳ ಹಿಂದೆ ಮುಚ್ಚಲಾಗಿದ್ದ ಬದರಿನಾಥ ದೇಗುಲದ ಬಾಗಿಲನ್ನು ಭಕ್ತರ ದರ್ಶನಕ್ಕಾಗಿ ಇಂದಿನಿಂದ ತೆರೆಯಲಾಗಿದೆ.