alex Certify ʼರಿಲಯನ್ಸ್‌ ಇಂಡಸ್ಟ್ರೀಸ್‌ʼ ಕಂಪನಿಯ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್‌ ಕಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಿಲಯನ್ಸ್‌ ಇಂಡಸ್ಟ್ರೀಸ್‌ʼ ಕಂಪನಿಯ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್‌ ಕಹಾನಿ

ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಕಂಪನಿಯ ಹೆಸರಿನ ಅರ್ಥ ಬಹುತೇಕರಿಗೆ ತಿಳಿದಿಲ್ಲ.  ರಿಲಯನ್ಸ್‌ಗಿಂತ ಮೊದಲು ಅವರ ಕಂಪನಿಯ ಹೆಸರನ್ನು ಮೂರು ಬಾರಿ ಬದಲಾಯಿಸಲಾಗಿದೆ. ಕಂಪನಿಗೆ ಬುನಾದಿ ಹಾಕಿದ ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ, ಸಂಸ್ಥೆಯ ಹೆಸರನ್ನು ಮೂರು ಬಾರಿ ಬದಲಾಯಿಸಿದ್ದರು. ಅದರ ಹಿಂದಿನ ಕಾರಣ ತುಂಬಾ ಆಸಕ್ತಿದಾಯಕವಾಗಿದೆ.

ರಿಲಯನ್ಸ್ ಎಂಬ ಹೆಸರು ಹೇಗೆ ಬಂತು?

ಧೀರೂಭಾಯಿ ಅಂಬಾನಿ 1958 ರಲ್ಲಿ ರಿಲಯನ್ಸ್ ಗ್ರೂಪ್ ಅನ್ನು ಸ್ಥಾಪಿಸಿದರು. ತಮ್ಮ ಸೋದರ ಸಂಬಂಧಿ ಚಂಪಕ್‌ಲಾಲ್‌ ದಮಾನಿ ಅವರ ಜೊತೆಗೂಡಿ ಕಂಪನಿಯನ್ನು ಪ್ರಾರಂಭಿಸಿದರು. 1950ರ ದಶಕದಲ್ಲಿ ಧೀರೂಭಾಯಿ ಅಂಬಾನಿ, ಯೆಮೆನ್‌ನಲ್ಲಿ ಮಸಾಲೆಗಳು ಮತ್ತು ಪಾಲಿಯೆಸ್ಟರ್ ನೂಲು ತರಲು ಮಜಿನ್ ಎಂಬ ವ್ಯಾಪಾರವನ್ನು ಪ್ರಾರಂಭಿಸಿದರು. ಇಲ್ಲಿಂದ ರಿಲಯನ್ಸ್ ಆರಂಭವಾಯಿತು. ಈ ಕಂಪನಿಯು ನಂತರ ರಿಲಯನ್ಸ್ ಇಂಡಸ್ಟ್ರೀಸ್ ಆಯಿತು.

ಅಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಧೀರೂಭಾಯಿ ಅಂಬಾನಿ ಮತ್ತು ಅವರ ಸಹೋದರ ಚಂಪಕ್ಲಾಲ್ ದಮಾನಿ 1960ರ ದಶಕದಲ್ಲಿ ಭಾರತಕ್ಕೆ ಮರಳಿದರು. ಇಲ್ಲಿ ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಷನ್ ಎಂಬ ಹೊಸ ಉದ್ಯಮವನ್ನು ಪ್ರಾರಂಭಿಸಿದರು.

ಧೀರೂಭಾಯಿ ಅಂಬಾನಿ ಸಣ್ಣ ಉದ್ಯಮಿಯಾಗಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಆದರೆ ಕೆಲವೇ ವರ್ಷಗಳಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದರು. ಆದರೆ ವ್ಯಾಪಾರ ಬೆಳೆದಂತೆ ಇಬ್ಬರು ಪಾಲುದಾರರ ನಡುವೆ ಭಿನ್ನಾಭಿಪ್ರಾಯಗಳು ಪ್ರಾರಂಭವಾದವು, ನಂತರ ಅಂಬಾನಿ ಮತ್ತು ದಮಾನಿ ವ್ಯವಹಾರವು 1965ರಲ್ಲಿ ವಿಭಜನೆಯಾಯಿತು. ನಂತರ ಧೀರೂಭಾಯಿ ಅಂಬಾನಿ ಜವಳಿ ವ್ಯಾಪಾರದ ಮೇಲೆ ಗಮನ ಕೇಂದ್ರೀಕರಿಸಿದರು. ವಿಭಜನೆಯ ನಂತರ  1966 ರಲ್ಲಿ ಧೀರೂಭಾಯಿ ಅಂಬಾನಿ ಕಂಪನಿಯ ಹೆಸರನ್ನು ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಷನ್ ನಿಂದ ರಿಲಯನ್ಸ್ ಟೆಕ್ಸ್‌ಟೈಲ್‌  ಎಂದು ಬದಲಾಯಿಸಿದರು.

ಮತ್ತೆ ಬಂತು ರಿಲಯನ್ಸ್ ಇಂಡಸ್ಟ್ರೀಸ್ ಹೆಸರು

ಜವಳಿ ವ್ಯಾಪಾರದಲ್ಲಿ ಸೈ ಎನಿಸಿಕೊಂಡ ಬಳಿಕ ಧೀರೂಭಾಯಿ ಅಂಬಾನಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಪ್ರಾರಂಭಿಸಿದರು. ಕಂಪನಿಯ ಹೆಸರನ್ನು ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಷನ್‌ನಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಬದಲಾಯಿಸಿದರು. ಧೀರೂಬಾಯಿ ಅಂಬಾನಿ ಅವರ ಮರಣದ ನಂತರ ಕಂಪನಿಯು ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ನಡುವೆ ಹಂಚಿಕೆಯಾಯಿತು.

ರಿಲಯನ್ಸ್ಎಂಬ ಹೆಸರೇಕೆ?

ಧೀರೂಭಾಯಿ ಅಂಬಾನಿ ಕಂಪನಿಯ ಹೆಸರನ್ನು ‘ರಿಲಯನ್ಸ್’ ಎಂದು ಆಯ್ಕೆ ಮಾಡಿದರು. ಈ ಹೆಸರಿನ ಹಿಂದಿನ ಅವರ ಆಲೋಚನೆಯು  ಕಂಪನಿಯು ಉತ್ಪನ್ನಗಳು ಮತ್ತು ಅಸಾಧಾರಣ ಸೇವೆಯ ನಂಬಿಕೆಯ ಸಂಕೇತವಾಗಿದೆ. ಕಂಪನಿಯ ಹೆಸರಿನಲ್ಲಿ ನಂಬಿಕೆ ಮತ್ತು ಸ್ವಾವಲಂಬನೆಯನ್ನು ಕಾಪಾಡಿಕೊಳ್ಳಲು ಅವರು ಬಯಸಿದ್ದರು. ರಿಲಯನ್ಸ್ ಎಂದರೆ ಖಚಿತ ಅಥವಾ ವಿಶ್ವಾಸಾರ್ಹ ಅವಲಂಬನೆ ಎಂದರ್ಥ. ಹಾಗಾಗಿಯೇ ಕಂಪನಿಯ ಹೆಸರನ್ನು ಮೂರು ಬಾರಿ ಬದಲಾಯಿಸಿದ ನಂತರವೂ ರಿಲಯನ್ಸ್ ಪದವನ್ನು ಮುಂದುವರೆಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...