ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GMC) ಸೆಪ್ಟೆಂಬರ್ 2023 ರಲ್ಲಿ ಜಾರಿಗೊಳಿಸಿದ ನಗರದ ಶ್ವಾನ ನೀತಿಯ ಮಾನದಂಡಗಳನ್ನು ಅನುಸರಿಸದಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ 10 ಸಾವಿರ ರೂ. ದಂಡ ಹಾಕಿದೆ. ಈ ಮೂಲಕ ರಾಜೇಂದ್ರ ನಗರದ ನಿವಾಸಿಯೊಬ್ಬರ ವಿರುದ್ಧ ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದೆ.
ನೂತನ ಶ್ವಾನ ನಾಯಿ ನೀತಿಯ ಅಡಿಯಲ್ಲಿ , ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳನ್ನು ನೋಂದಾಯಿಸಬೇಕು. ನೋಂದಣಿ ಫಾರ್ಮ್ ಜೊತೆ ಲಸಿಕೆ ದಾಖಲೆಗಳ ಪುರಾವೆಗಳನ್ನು ಲಗತ್ತಿಸಬೇಕು. ನೋಂದಣಿ ಶುಲ್ಕ 1,000 ರೂ. ಮತ್ತು ನವೀಕರಣ ಶುಲ್ಕ 500 ರೂ. ನೀಡಬೇಕು. ಅದರ ಹೊರತಾಗಿ, ನಿವೇಶನದ ಗಾತ್ರಕ್ಕೆ ಅನುಗುಣವಾಗಿ ವಸತಿ ಪ್ರದೇಶಗಳಲ್ಲಿ ಸಾಕು ನಾಯಿಗಳ ಸಂಖ್ಯೆಗೆ ನಿರ್ದಿಷ್ಟ ಮಿತಿ ಹಾಕಲಾಗಿದೆ.
182 ಚದರ ಮೀಟರ್ ಖಾಸಗಿ ಆವರಣದಲ್ಲಿ ಎರಡು ಸಾಕು ನಾಯಿಗಳನ್ನು ಮಾತ್ರ ಸಾಕಲು ಅನುಮತಿಸಲಾಗಿದೆ. 273 ಚದರ ಮೀಟರ್ ಜಾಗದಲ್ಲಿ ನಾಲ್ಕು ಸಾಕುಪ್ರಾಣಿಗಳನ್ನು ಅನುಮತಿಸಲಾಗಿದೆ. ಇದಲ್ಲದೆ, ನಿಗದಿತ ನಿಯಮಗಳ ಪ್ರಕಾರ, ವಸತಿ ಪ್ರದೇಶಗಳಲ್ಲಿ ಐದಕ್ಕಿಂತ ಹೆಚ್ಚು ಸಾಕು ನಾಯಿಗಳನ್ನು ಸಾಕುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಈ ನಿಯಮಗಳನ್ನು ಜಾರಿಗೊಳಿಸಿದ್ದರೂ ಈ ವರ್ಷದ ಮಾರ್ಚ್ನಲ್ಲಿ ನಾಯಿ ದಾಳಿ ನಡೆಸಿದಾಗ ಅದರ ಮಾಲೀಕರು ಮಾನ್ಯ ಮಾಡಿದ ನಾಯಿಯ ಹೆಸರಿನ ಪ್ರಮಾಣಪತ್ರವನ್ನು ನೀಡಲು ವಿಫಲವಾದ ಕಾರಣ ರಾಜೇಂದ್ರನಗರ ನಿವಾಸಿಗೆ 10,000 ರೂಪಾಯಿ ದಂಡ ವಿಧಿಸಲಾಗಿದೆ. ಈ ರೀತಿ ದಂಡ ವಿಧಿಸುವಿಕೆಯು ಜವಾಬ್ದಾರಿಯುತ ಸಾಕುಪ್ರಾಣಿಗಳ ಮಾಲೀಕತ್ವವನ್ನು ನಿಯಂತ್ರಿಸುವ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ ಎಂದು ಜಿಎಂಸಿಯ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.