ಬ್ಯಾಂಕ್ ನೌಕರರು ಪಡೆಯುವ ರಿಯಾಯಿತಿ ದರದ ಸಾಲ ಸೌಲಭ್ಯ ಅಥವಾ ಬಡ್ಡಿ ರಹಿತ ಸಾಲ ಸೌಲಭ್ಯವು ವಿಶೇಷ ಸವಲತ್ತು ಇದ್ದಂತೆ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಇವುಗಳಿಗೆ ಆದಾಯ ತೆರಿಗೆ ಕಾಯ್ದೆ ಅಡಿ ತೆರಿಗೆ ಅನ್ವಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.
ಈ ವಿಶೇಷ ಸವಲತ್ತುಗಳಿಗೆ ತೆರಿಗೆ ವಿಧಿಸುವುದನ್ನು ಪ್ರಶ್ನಿಸಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರುಗಳಿದ್ದ ವಿಭಾಗಿಯ ಪೀಠ, ಎಸ್‌ಬಿಐ ನಿಗದಿ ಮಾಡಿರುವ ಬಡ್ಡಿ ದರವನ್ನು ಮಾನದಂಡವೆಂದು ಪರಿಗಣಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದೆ.
ನಿಯಮಗಳಂತೆ ಬ್ಯಾಂಕುಗಳು, ತನ್ನ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ಅಥವಾ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಿದರೆ ಇದನ್ನು ವಿಶೇಷ ಸೌಲಭ್ಯ ಎಂದು ಪರಿಗಣಿಸಿ ಬಡ್ಡಿ ದರವು ಎಸ್‌ಬಿಐ ನಿಗದಿ ಮಾಡಿರುವ ಸಾಲದ ಬಡ್ಡಿ ದರಕ್ಕಿಂತ ಕಡಿಮೆ ಇದ್ದರೆ ಅವುಗಳಿಗೆ ತೆರಿಗೆ ವಿಧಿಸಬಹುದಾಗಿದೆ.