alex Certify ಬೊಜ್ಜಿನ ಸಮಸ್ಯೆ ಇರುವವರು ಪ್ರತಿದಿನ ಸಂಜೆ ಮಾಡಬೇಕು ಈ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೊಜ್ಜಿನ ಸಮಸ್ಯೆ ಇರುವವರು ಪ್ರತಿದಿನ ಸಂಜೆ ಮಾಡಬೇಕು ಈ ಕೆಲಸ…!

ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಿಗೆ ಸಂಜೆ ವ್ಯಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಜೆಯ ಸಮಯದಲ್ಲಿ ಚಟುವಟಿಕೆಯ ವ್ಯಾಯಾಮವನ್ನು ಮಾಡುವುದರಿಂದ ಹೃದ್ರೋಗ, ಸೂಕ್ಷ್ಮ ನಾಳಗಳ ಕಾಯಿಲೆ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು.

ಬೆಳಿಗ್ಗೆ ಅಥವಾ ಮಧ್ಯಾಹ್ನಕ್ಕೆ ಹೋಲಿಸಿದರೆ ಸಂಜೆ ವ್ಯಾಯಾಮ ಮಾಡುವ ಜನರು ಮರಣದ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ. ಬೊಜ್ಜು ಮತ್ತು ಟೈಪ್ 2 ಮಧುಮೇಹ ಹೊಂದಿರುವ ಜನರನ್ನು ಒಳಗೊಂಡ ಅಧ್ಯಯನದಲ್ಲಿ ಈ ಸಂಗತಿ ಬಯಲಾಗಿದೆ.

ಅಧ್ಯಯನದಲ್ಲಿ ದೈಹಿಕ ಚಟುವಟಿಕೆಯನ್ನು ಅಳೆಯಲು ಡಿವೈಸ್‌ ಒಂದನ್ನು ಬಳಸಲಾಯ್ತು. ಬೆಳಗ್ಗೆ (6 ರಿಂದ 12 ರವರೆಗೆ), ಮಧ್ಯಾಹ್ನ (12 ರಿಂದ 6 ರವರೆಗೆ) ಮತ್ತು ಸಂಜೆ (ಸಂಜೆ 6 ರಿಂದ ಮಧ್ಯರಾತ್ರಿ 12 ರವರೆಗೆ) ವ್ಯಾಯಾಮ ಮಾಡುವ ಗುಂಪುಗಳಾಗಿ ವಿಂಗಡಿಸಲಾಗಿತ್ತು. ದಿನಕ್ಕೆ 1 ಗಂಟೆಗಿಂತ ಕಡಿಮೆ ಏರೋಬಿಕ್ ವ್ಯಾಯಾಮ ಮಾಡುವವರನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಅಧ್ಯಯನದ ಮುಖ್ಯ ಫಲಿತಾಂಶಗಳು ಮರಣ, ಹೃದ್ರೋಗದ ಸಂಭವ ಮತ್ತು ಸೂಕ್ಷ್ಮ ನಾಳಗಳ ಕಾಯಿಲೆಯ ಸಂಭವವನ್ನು ಒಳಗೊಂಡಿದೆ.

ವ್ಯಾಯಾಮದ ಒಟ್ಟು ಅವಧಿಗಿಂತ ಸಂಜೆ ವ್ಯಾಯಾಮ ಮಾಡುವುದು ಹೆಚ್ಚು ಮುಖ್ಯ ಎಂಬುದು ಇದರಲ್ಲಿ ಸಾಬೀತಾಗಿದೆ. ಸಂಜೆ ವ್ಯಾಯಾಮ ಮಾಡಿದ ಗುಂಪು ಮರಣದ ಕಡಿಮೆ ಅಪಾಯವನ್ನು ಹೊಂದಿದೆ. ಬೊಜ್ಜು ಮತ್ತು ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಸಂಜೆಯ ವ್ಯಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದೆ. ವ್ಯಾಯಾಮದ ಸಮಯವು ಒಟ್ಟು ಅವಧಿಗಿಂತ ಹೆಚ್ಚು ಮುಖ್ಯ. ಹಾಗಾಗಿ ಗಂಟೆಗಟ್ಟಲೆ ಬೆವರು ಸುರಿಸುವುದಕ್ಕಿಂತ ಸರಿಯಾದ ಸಮಯದಲ್ಲಿ ವ್ಯಾಯಾಮ ಮಾಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...