ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಭಗತ್ ರಾಜ್ ನಿರ್ದೇಶನದ ‘ದ ಸೂಟ್’ ಚಿತ್ರದ ಟ್ರೈಲರ್ ಇದೇ ಮೇ 17ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ಈ ಚಿತ್ರದಲ್ಲಿ ಕಮಲ್ ಸೇರಿದಂತೆ ಸುಜಯ್, ಧನ್ವಿ ಕೊಟ್ರೆ, ದೀಪ್ತಿ ಕಪ್ಸೆ, ನಾಗೇಂದ್ರ ಪ್ರಸಾದ್, ಉಮೇಶ್ ಬಣಕಾರ್, ಮತ್ತು ಸಿದ್ಲಿಂಗು ಶ್ರೀಧರ್, ತೆರೆ ಹಂಚಿಕೊಂಡಿದ್ದು, ಅಭ್ಯುದಯ ಕಂಬೈನ್ಡ್ಸ್ ಬ್ಯಾನರ್ ನಲ್ಲಿ ರಾಮಸ್ವಾಮಿ ನಿರ್ಮಾಣ ಮಾಡಿದ್ದಾರೆ. ಸುರೇಶ್ ಡಿ.ಹೆಚ್. ಸಂಕಲನ, ಕಿರಣ್ ಹಂಪಾಪುರ ಛಾಯಾಗ್ರಹಣವಿದೆ. ಕಿರಣ್ ಶಂಕರ್ ಸಂಗೀತ ಸಂಯೋಜನೆ ನೀಡಿದ್ದಾರೆ.