alex Certify 11 ಮಂಗಳವಾರಗಳ ಕಾಲ ಮಂಗಗಳಿಗೆ ತಿನ್ನಿಸಿ ಈ ಪದಾರ್ಥ; ಇಷ್ಟಾರ್ಥ ಈಡೇರುವುದಲ್ಲದೆ ಅದೃಷ್ಟವೂ ಒಲಿಯುತ್ತದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

11 ಮಂಗಳವಾರಗಳ ಕಾಲ ಮಂಗಗಳಿಗೆ ತಿನ್ನಿಸಿ ಈ ಪದಾರ್ಥ; ಇಷ್ಟಾರ್ಥ ಈಡೇರುವುದಲ್ಲದೆ ಅದೃಷ್ಟವೂ ಒಲಿಯುತ್ತದೆ…!

ಹಿಂದೂ ಧರ್ಮದಲ್ಲಿ ವಾರದ ಎಲ್ಲಾ ಏಳು ದಿನಗಳು ದೇವಾನುದೇವತೆಗಳಿಗೆ ಮೀಸಲಾಗಿವೆ. ಮಂಗಳವಾರ ಸಂಕಷ್ಟ ಮೋಚನ ಹನುಮಂತನ ದಿನ. ಈ ದಿನದಂದು ಬಜರಂಗಬಲಿಯು ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ. ಭಕ್ತರ ಎಲ್ಲಾ ದುಃಖ ಮತ್ತು ತೊಂದರೆಗಳನ್ನು ನಿವಾರಿಸುತ್ತಾನೆ. ಜ್ಯೋತಿಷ್ಯದಲ್ಲಿ ಮಂಗಳವಾರವನ್ನು ಪೂಜೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಮಂಗಳವಾರದಂದು ಭಗವಾನ್ ಹನುಮಂತನ ಕೃಪೆಗಾಗಿ ಕೆಲವು ಕಾರ್ಯಗಳನ್ನು ಮಾಡಿದರೆ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಇಷ್ಟಾರ್ಥಗಳೆಲ್ಲ ಸಿದ್ಧಿಸುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳವಾರ ಬೆಳಗ್ಗೆ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಆಂಜನೇಯ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪವನ್ನು ಬೆಳಗಿಸಿ. ಹನುಮಂತನಿಗೆ ಲಡ್ಡು ನೈವೇದ್ಯ ಅರ್ಪಿಸಬೇಕು. ಹನುಮಾನ್ ಚಾಲೀಸಾ ಪಠಣ ಮಾಡುವುದು ಕೂಡ ಬಹಳ ಶ್ರೇಯಸ್ಕರ. ಇದರಿಂದ ಬಜರಂಗಬಲಿ ಸಂತುಷ್ಠಗೊಂಡು ಅಡೆತಡೆಗಳನ್ನೆಲ್ಲ ನಿವಾರಿಸುತ್ತಾನೆ.

ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತರಾಗಲು ಬಯಸಿದರೆ ಮಂಗಳವಾರ ಮಂಗಗಳಿಗೆ ಬೆಲ್ಲ, ಬೇಳೆ, ಕಡಲೆಕಾಯಿ ಅಥವಾ ಬಾಳೆಹಣ್ಣು ತಿನ್ನಿಸಿ. ಈ ದಿನದಂದು ಬಡವರಿಗೆ ಈ ವಸ್ತುಗಳನ್ನು ದಾನ ಮಾಡುವುದರಿಂದಲೂ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗುತ್ತದೆ. ಈ ಕ್ರಮಗಳನ್ನು 11 ಮಂಗಳವಾರಗಳ ಕಾಲ ನಿರಂತರವಾಗಿ ಮಾಡಬೇಕು.

ಚಿಕ್ಕ ಮಗು ಮನೆಯಲ್ಲಿ ತುಂಬಾ ಅಳುತ್ತಿದ್ದರೆ ಮಂಗಳವಾರ ಮಗುವಿನ ಹಾಸಿಗೆಯ ಕೆಳಗೆ ನೀಲಕಂಠದ ಗರಿಯನ್ನು ಇರಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರದಂದು ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ಹನುಮಂತನ ಆಶೀರ್ವಾದವನ್ನು ಸಿಗುತ್ತದೆ. ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.

ಆಂಜನೇಯನನ್ನು ಮೆಚ್ಚಿಸಲು ಮಂಗಳವಾರದಂದು ಸಾಯಂಕಾಲದ ಪೂಜೆಯ ವೇಳೆ ಕೇವದ ಸುಗಂಧ ಮತ್ತು ಗುಲಾಬಿ ಮಾಲೆಯನ್ನು ಅರ್ಪಿಸಿ. ಅಷ್ಟೇ ಅಲ್ಲ ಬಾರ್ಲಿ ಹಿಟ್ಟಿನಲ್ಲಿ ಕಪ್ಪು ಎಳ್ಳು ಮತ್ತು ಎಣ್ಣೆಯನ್ನು ಬೆರೆಸಿ ರೊಟ್ಟಿಯನ್ನು ಮಾಡಿ, ಈ ರೊಟ್ಟಿಗೆ ಹಿಟ್ಟು ಮತ್ತು ಬೆಲ್ಲವನ್ನು ಹಚ್ಚಬೇಕು. ಇದರಿಂದ ಮಗುವಿಗೆ ದೃಷ್ಟಿ ಬಳಿದು ಎಮ್ಮೆಗೆ ತಿನ್ನಿಸಿ. ಇದು ದುಷ್ಟ ಕಣ್ಣಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...