ಭಯಾನಕ ಕೃತ್ಯ: ಯುವತಿಗೆ ಮತ್ತಿನ ಪಾನೀಯ ನೀಡಿ ಪತಿಯಿಂದ ಅತ್ಯಾಚಾರ ಮಾಡಿಸಿದ ರಕ್ಕಸಿ

ಮಹಿಳೆಗೆ ಮತ್ತು ಬರುವ ಪಾನೀಯ ನೀಡಿ ಆಕೆಯನ್ನು ತನ್ನ ಗಂಡನಿಂದಲೇ ಅತ್ಯಾಚಾರ ಮಾಡಿಸಿ ಕೃತ್ಯವನ್ನು ವಿಡಿಯೋ ಮಾಡಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು 36 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಈ ಹೇಯ ಕೃತ್ಯವನ್ನು ಆರೋಪಿ ಮಹಿಳೆ ಚಿತ್ರೀಕರಿಸಿ ಸಂತ್ರಸ್ತೆಯ ಬಳಿ ಹಣ ಸುಲಿಗೆ ಮಾಡಲು ಬೆದರಿಸುತ್ತಿದ್ದಳು.

22 ವರ್ಷದ ಸಂತ್ರಸ್ತ ಯುವತಿ ದೂರು ನೀಡಿದ ಬಳಿಕ ಪೊಲೀಸರು ಆರೋಪಿ ಮಹಿಳೆಯನ್ನು ತಕ್ಷಣ ಬಂಧಿಸಿ ಆಕೆಯ ಪತಿಗಾಗಿ ಹುಡುಕುತ್ತಿದ್ದಾರೆ.

ವರದಿಗಳ ಪ್ರಕಾರ ಆರೋಪಿಯು ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿದ್ದು, ಸಂತ್ರಸ್ತೆಗೆ ಮೊದಲೇ ಆಕೆಯ ಪರಿಚಯವಿತ್ತು. ಪೊಲೀಸ್ ವರದಿಗಳ ಪ್ರಕಾರ, ಈವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂತ್ರಸ್ತ ಯುವತಿಗೆ ಆರೋಪಿ ಮಹಿಳೆಯಿಂದ ಕರೆ ಬಂದಿದೆ. ಆರೋಪಿ ಆಕೆಯನ್ನು ಮಾಲ್ವಾನಿಯಲ್ಲಿರುವ ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದು ಜಾಣತನದಿಂದ ಆಕೆಗೆ ಮತ್ತು ಬರುವ ಪಾನೀಯ ನೀಡಿದ್ದಾಳೆ. ಸಂತ್ರಸ್ತೆ ಭಾಗಶಃ ಪ್ರಜ್ಞೆ ಕಳೆದುಕೊಂಡ ಬಳಿಕ ಆರೋಪಿ ಮಹಿಳೆಯ ಪತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಸಂತ್ರಸ್ತೆಗೆ ಪ್ರಜ್ಞೆ ಬಂದಾಗ ತನ್ನ ಮೇಲೆ ಅತ್ಯಾಚಾರವೆಸಗಿರುವುದನ್ನು ಅರಿತುಕೊಂಡ ಆಕೆ ಈ ಅಪರಾಧವನ್ನು ಚಿತ್ರೀಕರಿಸಿರುವ ಬಗ್ಗೆ ತಿಳಿದಳು. ನಂತರ ಆರೋಪಿ ದಂಪತಿಗಳು ಸಂತ್ರಸ್ತೆಯನ್ನು ಬೆದರಿಸಿ ಆಕೆಯಿಂದ 10,000 ರೂ. ಕೇಳಿದ್ದು, ಕೊಡದಿದ್ದರೆ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆ ಹಣ ನೀಡಲು ನಿರಾಕರಿಸಿದಾಗ ಆರೋಪಿಗಳಿಬ್ಬರೂ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಭಯಾನಕ ಘಟನೆ ನಡೆದ ಒಂದು ದಿನದ ನಂತರ ಸಂತ್ರಸ್ತೆ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು ಆರೋಪಿ ಬ್ಯೂಟಿಷಿಯನ್ ಳನ್ನು ಬಂಧಿಸಿದ್ದಾರೆ. ಆದರೆ ಮಹಿಳೆಯ ಪತಿ ತಲೆಮರೆಸಿಕೊಂಡಿದ್ದು ಆತನನ್ನು ಪತ್ತೆಹಚ್ಚಿಚ್ಚಲು ಮುಂದಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read