BREAKING NEWS: ಸಿಡಿಲು ಬಡಿದು ಹೊತ್ತಿ ಉರಿದ ಜಾನಪದಲೋಕದ ಗಿರಿಜನ ಮನೆ

ರಾಮನಗರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಕೆಲವೆಡೆ ಸಿಡಿಲು ಬಡಿದು ಅವಾಂತರಗಳು ಸೃಷ್ಟಿಯಾಗಿವೆ. ಸಿಡಿಲು ಬಡಿದು ಪ್ರವಾಸಿ ತಾಣದ ಜಾನಪದಲೋಕದ ಗಿರಿಜನ ಮನೆಗೆ ಬಿಂಕಿ ಹೊತ್ತಿ ಉರಿದ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರದ ಪ್ರಖ್ಯಾತ ಜಾನಪದ ಲೋಕದಲ್ಲಿರುವ ಗಿರಿಜನ ಮನೆ ಮೇಲೆ ಸಿಡಿಲು ಬಡಿದ ಹೊಡೆತಕ್ಕೆ ಬೆಂಕಿ ಹೊತ್ತಿಕೊಂಡಿದೆ. ಹುಲ್ಲಿನಿಂದ ನಿರ್ಮಾಣ ಮಾಡಿದ್ದ ಹಾಡಿ ಜನರ ಗಿರಿಜನ ಮನೆ ಬೆಂಕಿಗಾಹುತಿಯಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಿಡಿಲ ಆರ್ಭಟಕ್ಕೆ ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ.

ಇನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಹೆಬ್ಬಗೋಡಿ, ರಾಮನಗರ, ಮೈಸೂರಿನ ಹಲವೆಡೆಗಳಲ್ಲಿ ಬಿರುಗಳಿ ಸಹಿತ ಆಲಿಕಲ್ಲು ಮಳೆಯಾಗುಗಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read