ಚುನಾವಣೆ ಪ್ರಚಾರ ಕಾರ್ಯಕ್ಕೆ ಶಿವಸೇನೆ ನಾಯಕರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ.
ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಈ ಘಟನೆ ನಡೆದಿದೆ. ಇಬ್ಬರು ಪೈಲಟ್ ಗಳಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಶಿವಸೇನೆಯ ಶಿಂಧೆ ಬಣದ ನಾಯಕಿ ಸುಷ್ಮಾ ಅಂಧಾರೆ ಅವರನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರ್ಯಾಲಿಗಾಗಿ ಕರೆದೊಯ್ಯಲಾಗುತ್ತಿತ್ತು. ಹೆಲಿಕಾಪ್ಟರ್ ನ್ನು ಮಹುಹಾದ್ ನಲ್ಲಿರುವ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ಇಳಿಸಲು ಯತ್ನಿಸಿದಾಗ ಹೆಲಿಕಾಪ್ಟರ್ ಏಕಾಏಕಿ ನಿಯಂತ್ರಣ ಕಳೆದುಕೊಂಡು ದೊಡ್ಡದಾಗಿ ಶಬ್ಧಮಾಡುತ್ತಾ ನೆಲಕೆ ಬಡಿದಿದೆ. ಹೆಲಿಕಾಪ್ಟರ್ ರೋಟರ್ ಬ್ಲೇಡ್ ಗಳಿಗೂ ಹಾನಿಯಾಗಿವೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ತಕ್ಷನ ಹೆಲಿಕಾಪ್ಟರ್ ನಲ್ಲಿದ್ದವರನ್ನು ಹಾಗೂ ಪೈಲಟ್ ಗಳನ್ನು ರಕ್ಷಿಸಿದ್ದಾರೆ.