ಜಿಮ್ ನಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಎಂತಹ ಅಪಾಯಗಳು ಸಂಭವಿಸುತ್ತವೆ ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದ ಸ್ಥಳ ಮತ್ತು ದಿನಾಂಕ ಸ್ಪಷ್ಟವಿಲ್ಲದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಾಲೀಮು ಸಮಯದಲ್ಲಿ ಪೆಕ್ ಡೆಕ್ ಯಂತ್ರದ ಹ್ಯಾಂಡಲ್ನಿಂದ ಮಹಿಳೆಯನ್ನು ಉದ್ದೇಶರಹಿತವಾಗಿ ಹೊಡೆಯುವ ದೃಶ್ಯ ಬೆಚ್ಚಿಬೀಳಿಸಿದೆ.
ಟ್ವಿಟ್ಟರ್ನಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ವೀಡಿಯೊದಲ್ಲಿ ಪುರುಷನೊಬ್ಬ ಪೆಕ್ ಡೆಕ್ ಯಂತ್ರದಲ್ಲಿ ವರ್ಕ್ ಔಟ್ ಮಾಡುತ್ತಿದ್ದು, ಆತನ ಪಕ್ಕದಲ್ಲಿ ಯುವತಿಯೊಬ್ಬಳು ಮೊಬೈಲ್ ನೋಡುತ್ತಾ ನಿಂತಿರುತ್ತಾಳೆ.
ಈ ವೇಳೆ ಪುರುಷ ಇದ್ದಕ್ಕಿದ್ದಂತೆ ಪೆಕ್ ಡೆಕ್ ಯಂತ್ರದಲ್ಲಿ ವರ್ಕೌಟ್ ನಿಧಾನಗೊಳಿಸಿ ಯಂತ್ರವನ್ನು ಸಡಿಲಗೊಳಿಸ್ತಿದ್ದಂತೆ ಅದರ ಹಿಡಿಕೆಯು ವೇಗವಾಗಿ ಯುವತಿಗೆ ಬಡಿಯುತ್ತದೆ. ತಕ್ಷಣ ಆಕೆ ಕೆಳಕ್ಕೆ ಬೀಳುತ್ತಾಳೆ. ಈ ಘಟನೆಯು ಭಾರೀ ಸಲಕರಣೆಗಳನ್ನು ಹೊಂದಿರುವ ಜಿಮ್ಗಳಲ್ಲಿ ಜಾಗರೂಕತೆ ಮತ್ತು ಗಮನದ ಅವಶ್ಯಕತೆಯನ್ನು ಎತ್ತಿ ಹೇಳುತ್ತದೆ.