ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಅವರ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿರಾಕರಿಸಿದ್ದಾರೆ.
ವಿಡಿಯೋ ವಿಚಾರವಾಗಿ ನನಗೆ ಪತ್ರ ಕಳುಹಿಸಿದ್ದೆ ಎಂಬುದು ಸುಳ್ಳು. ನನಗೆ ಅಂತಹ ಯಾವುದೇ ಪತ್ರ ತಲುಪಿಲ್ಲ. ಅಂತಹ ವಿಡಿಯೋ ಬಗ್ಗೆ ಯಾವುದೇ ಮಾಹಿತಿ ಕೂಡ ಇರಲಿಲ್ಲ ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀಡಿಯೊಗಳ ಬಗ್ಗೆ ತಿಂಗಳುಗಳ ಹಿಂದೆಯೇ ತಿಳಿದಿದ್ದರು. ಆದರೆ ಅವುಗಳನ್ನು ಬಹಿರಂಗಪಡಿಸಲು ಚುನಾವಣೆ ಹತ್ತಿರವಾಗಲು ಕಾಯುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಅವರಿಗೆ ವಿಡಿಯೋಗಳ ಬಗ್ಗೆ ತಿಳಿದಿದ್ದರೆ ಕಾಂಗ್ರೆಸ್ ಸರ್ಕಾರ ತಕ್ಷಣ ತನಿಖೆಗೆ ಏಕೆ ಆದೇಶಿಸಲಿಲ್ಲ? ಚುನಾವಣೆವರೆಗೂ ಏಕೆ ಕಾಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನಿಮ್ಮ ಸರ್ಕಾರ ಇರುವಾಗ ತನಿಖೆಗೆ ಆದೇಶಿಸುವ ಮತ್ತು ಕ್ರಮ ತೆಗೆದುಕೊಳ್ಳುವ ಅಧಿಕಾರ ನಿಮಗಿರುವಾಗ ಈಗ ಬೀದಿಗಿಳಿಯುವುದೇಕೆ? ಯಾಕೆ ಈ ನಾಟಕ? ಕಾಂಗ್ರೆಸ್ ಸರ್ಕಾರ ಜನತೆಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.