ಹುಬ್ಬಳ್ಳಿ: ಚಿತ್ರರಂಗದವರು ಯಾವ ಪಕ್ಷದವರೂ ಅಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಸಂವಿಧಾನ ಸುರಕ್ಷತಾ ಸಮಿತಿ ಎದ್ದೇಳು ಕರ್ನಾಟಕ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಕೂಡ ಯಾವ ಪಕ್ಷದವನು ಅಲ್ಲ, ನನ್ನದು ವಿರೋಧ ಪಕ್ಷ ಎಂದು ಅವರು ತಿಳಿಸಿದ್ದಾರೆ. ದೇಶದ ತುಂಬಾ ಈಗ ಮಹಾಪ್ರಭುಗಳು ಓಡಾಡುತ್ತಿದ್ದಾರೆ. ಅವರನ್ನು ಹೆಸರಿನಿಂದ ಕರೆಯಬಾರದು, ಹಾಗಾಗಿ ಮಹಾಪ್ರಭು ಎನ್ನುತ್ತಿದ್ದೇನೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮುಖ ನೋಡಿ ಮತ ಹಾಕಿ ಅನ್ನೋದು ಆರಂಭವಾಗಿದೆ. ನಾವು ಗೆಲ್ಲಿಸಿದ ಬಿಜೆಪಿಯ ಸಂಸದರು ಅಭಿವೃದ್ಧಿ ಕೆಲಸ ಮಾಡಿಲ್ಲ. ನಿನಗೆ ಅಧಿಕಾರ ಕೊಟ್ಟಿದ್ದೇವೆ. ನೀನು ಏನು ಅಭಿವೃದ್ಧಿ ಮಾಡಿದ್ದೀಯಾ? ಎಂದು ಮೋದಿ ವಿರುದ್ಧ ಏಕವಚನದಲ್ಲಿ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
56 ಇಂಚಿನ ಮಹಾಪ್ರಭು ಯಾಕೆ ಕಳ್ಳರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಿ? ಭ್ರಷ್ಟಾಚಾರಿಗಳನ್ನು ಜೈಲಿಗೆ ಹಾಕುತ್ತೇನೆ ಎಂದು ಪಕ್ಷಕ್ಕೆ ಕರೆದುಕೊಂಡಿದ್ದೀರಿ. ನಾಚಿಕೆ ಮಾನ ಮರ್ಯಾದೆ ಇಲ್ವಾ ಎಂದು ವಾಗ್ದಾಳಿ ನಡೆಸಿದ್ದಾರೆ ಎಂದು ಭಾಷಣದುದ್ದಕ್ಕೂ ಮೋದಿ ವಿರುದ್ಧ ಕಿಡಿಕಾರಿದ್ದಾರೆ.