
ಮಂಗಳೂರು: ಪುತ್ತೂರಿನ ಮತಗಟ್ಟೆಯಲ್ಲಿ ಯುವಕನೊಬ್ಬ ಮತದಾನ ಮಾಡಿದ ಫೋಟೋ ವಾಟ್ಸಾಪ್ ನಲ್ಲಿ ಹಾಕಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮತಗಟ್ಟೆಯೊಳಗೆ ಮೊಬೈಲ್ ಬಳಕೆಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಆದರೂ ಅದನ್ನು ಉಲ್ಲಂಘಿಸಿ ಮತದಾನ ಮಾಡುವ ಫೋಟೋ ಮೊಬೈಲ್ ನಲ್ಲಿ ತೆಗೆದು ವಾಟ್ಸಾಪ್ ನಲ್ಲಿ ಹರಿಬಿಟ್ಟ ಯುವ ಕಾಂಗ್ರೆಸ್ ಮುಖಂಡ ರಂಜಿತ್ ಬಂಗೇರ ಅವರ ವಿರುದ್ಧ ಕೇಸ್ ದಾಖಲಾಗಿದೆ.
ಆರ್ಯಾಪು ನಿವಾಸಿಯಾಗಿರುವ ರಂಜಿತ್ ತಮ್ಮ ಬೆರಳು ಮತ್ತು ಮತಯಂತ್ರದ ಕಾಣುವಂತೆ ಮತ ಚಲಾವಣೆ ಮಾಡಿದ ಫೋಟೋ ತೆಗೆದು ವಾಟ್ಸಾಪ್ ಗ್ರೂಪ್ ನಲ್ಲಿ ಹರಿಬಿಟ್ಟಿದ್ದಾರೆ.ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.