ಬಾಳೆಹಣ್ಣು ವಾತ-ಪಿತ್ತ ದೋಷವನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ವಾತದ ಕ್ಷೀಣತೆಯು ಸುಮಾರು 80 ರೀತಿಯ ರೋಗಗಳನ್ನು ಉಂಟುಮಾಡಬಹುದು, ಆದರೆ ಬಾಳೆಹಣ್ಣು ತಿನ್ನುವ ಮೂಲಕ ಇವೆಲ್ಲವನ್ನೂ ತಪ್ಪಿಸಬಹುದು. ಬಾಳೆಹಣ್ಣು ತಿಂದರೆ ಒಂದಲ್ಲ ಎರಡಲ್ಲ 80 ಬಗೆಯ ಕಾಯಿಲೆಗಳು ನಿವಾರಣೆಯಾಗುತ್ತವೆ. ಇದು ತುಂಬಾ ಪೌಷ್ಟಿಕ ಮತ್ತು ಪ್ರಯೋಜನಕಾರಿ ಹಣ್ಣು. ಇದನ್ನು ತಿನ್ನುವುದರಿಂದ ದೇಹವು ಸದೃಢವಾಗುತ್ತದೆ.
ಆದಾಗ್ಯೂ ಕೆಲವೊಮ್ಮೆ ಬಾಳೆಹಣ್ಣು ಅಪಾಯಕಾರಿ ಮತ್ತು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡಬಹುದು. ಆಯುರ್ವೇದದಲ್ಲಿ ಕೆಲವರು ಬಾಳೆಹಣ್ಣು ತಿನ್ನುವುದನ್ನು ನಿಷೇಧಿಸಲು ಇದೇ ಕಾರಣ.
ತಜ್ಞರ ಪ್ರಕಾರ ಬಾಳೆಹಣ್ಣು ಆರೋಗ್ಯದ ನಿಜವಾದ ಸ್ನೇಹಿತ. ಇದು ಪೌಷ್ಠಿಕಾಂಶಗಳ ಖಜಾನೆಯಾಗಿದೆ. ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಬಿ 6, ಎಂಟಿಒಕ್ಸಿಡೆಂಟ್ ಗ್ಲುಟಾಥಿಯೋನ್, ಫಿನಾಲಿಕ್ಸ್, ಡೆಲ್ಫಿಡಿನಿನ್, ರುಟಿನ್ ಮತ್ತು ನರಿಂಗಿನ್ ಇದರಲ್ಲಿ ಕಂಡುಬರುತ್ತವೆ. ಬಾಳೆಹಣ್ಣು ಸೇವನೆಯಿಂದ ಶುಷ್ಕತೆ, ಮೂಳೆಗಳಲ್ಲಿ ಅಂತರ, ಮಲಬದ್ಧತೆ ಮುಂತಾದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.
ಆಯುರ್ವೇದದ ಪ್ರಕಾರ ಬಾಳೆಹಣ್ಣು ಪ್ರಕೃತಿಯಲ್ಲಿ ತಂಪಾಗಿರುತ್ತದೆ ಮತ್ತು ಇದು ಜೀರ್ಣಿಸಿಕೊಳ್ಳಲು ಕಷ್ಟ. ಬಾಳೆಹಣ್ಣು ಲೂಬ್ರಿಕೇಶನ್ ಆಗಿಯೂ ಕೆಲಸ ಮಾಡುತ್ತದೆ. ದೇಹವು ಒಣಗಿದ್ದರೆ ಅಥವಾ ಆಯಾಸ ಜಾಸ್ತಿಯಿದ್ದರೆ ಅವರು ಬಾಳೆಹಣ್ಣು ತಿನ್ನಬೇಕು. ನಿದ್ರೆಯ ಕೊರತೆ, ಕೋಪ, ಬಾಯಾರಿಕೆ ಮತ್ತು ದೇಹದ ಕಿರಿಕಿರಿ ಇವನ್ನೆಲ್ಲ ಬಾಳೆಹಣ್ಣು ನಿವಾರಿಸುತ್ತದೆ.
ಆಯುರ್ವೇದದ ಪ್ರಕಾರ ಬಾಳೆಹಣ್ಣು ಕಫ ದೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅತಿಯಾಗಿ ಕಫ ಇರುವವರು ಬಾಳೆಹಣ್ಣು ತಿನ್ನಬಾರದು. ಕಫ ಹೆಚ್ಚಾಗುವುದರಿಂದ ಸಾಕಷ್ಟು ಸಮಸ್ಯೆಗಳಾಗಬಹುದು. ಅಷ್ಟೇ ಅಲ್ಲ ಅಧಿಕ ತೂಕವಿರುವವರು ಕೂಡ ಬಾಳೆಹಣ್ಣು ತಿನ್ನದೇ ಇರುವುದು ಉತ್ತಮ. ಕೆಮ್ಮು ಮತ್ತು ಶೀತದ ಸಮಸ್ಯೆ, ಅಸ್ತಮಾದಿಂದ ಬಳಲುತ್ತಿರುವವರು ಬಾಳೆಹಣ್ಣು ತಿನ್ನಬಾರದು.