ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಗೈ ವಿಟ್ಟಲ್ ಚಿರತೆ ದಾಳಿಗೆ ಒಳಗಾಗಿದ್ದು, ಅದೃಷ್ಟವಶಾತ್ ಅವರು ಬದುಕುಳಿದಿದ್ದಾರೆ.
ಗೈ ವಿಟ್ಟಲ್ ಅವರು ವಾರದ ಆರಂಭದಲ್ಲಿ ಬೇಟೆಯ ಸಮಯದಲ್ಲಿ ಚಿರತೆ ದಾಳಿಗೊಳಗಾದ ನಂತರ ಗಾಯಗೊಂಡು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಘಟನೆಯು ಜಿಂಬಾಬ್ವೆಯ ಆಗ್ನೇಯ ಲೋವೆಲ್ಡ್‌ನಲ್ಲಿರುವ ಹುಮಾನಿಯಲ್ಲಿ ನಡೆದಿದೆ.
ವಿಟ್ಟಲ್ ತನ್ನ ಕುಟುಂಬದ ಆಟದ ಪ್ರದೇಶದಲ್ಲಿದ್ದಾಗ ಚಿರತೆ ದಾಳಿ ಮಾಡಿದೆ. ಅವರನ್ನು ಸಾಕು ನಾಯಿ ರಕ್ಷಿಸಿದೆ. ಅವರ ತಲೆ, ಕೈ ಕಾಲುಗಳಿಗೆ ಗಾಯಗಳಾಗಿವೆ. ಅವರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹರಾರೆಗೆ ತಕ್ಷಣವೇ ವಿಮಾನದಲ್ಲಿ ಸಾಗಿಸಲಾಯಿತು. ಅವರ ಪತ್ನಿ, ಹನ್ನಾ ಸ್ಟೂಕ್ಸ್-ವಿಟ್ಟಾಲ್ ಫೇಸ್ ಬುಕ್ ನಲ್ಲಿ ನೋವಿನ ಸುದ್ದಿ ಹಂಚಿಕೊಂಡಿದ್ದಾರೆ. ವಿಟ್ಟಲ್ ಗಮನಾರ್ಹ ಪ್ರಮಾಣದ ರಕ್ತವನ್ನು ಕಳೆದುಕೊಂಡಿದ್ದಾರೆ ಮತ್ತು ತುರ್ತು ಆರೈಕೆಯ ಅಗತ್ಯವಿದೆ ಎಂದು ಬಹಿರಂಗಪಡಿಸಿದ್ದಾರೆ.
1993 ರಿಂದ 2003ರವರೆಗೆ 46 ಟೆಸ್ಟ್, 147 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ.