ಭೋಪಾಲ್: ಲೋಕಸಭಾ ಚುನಾವಣೆ ಆರಂಭವಾಗಿದ್ದು ಹಲವೆಡೆ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಈ ನಡುವೆ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ, 21 ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಚುನಾವಣಾ ಕರ್ತವ್ಯಕ್ಕೆಂದು ಮಂಧ್ಯಪ್ರದೇಶದ ಬೇತುಲ್ ಜಿಲ್ಲೆಗೆ ಹೋಗಿದ್ದ ಗೃಹರಕ್ಷಕ ಸಿಬ್ಬಂದಿಗಳು, ಪೊಲೀಸರನ್ನು ಬಸ್ ನಲ್ಲಿ ಕರೆತರಲಾಗುತ್ತಿತ್ತು. ಈ ವೇಳೆ ಬಸ್ ಭೋಪಾಲ್-ಬೇತುಲ್ ಹೆದ್ದಾರಿಯ ಬರೇತಾ ಘಾಟ್ ಬಳಿ ಪಲ್ಟಿಯಾಗಿ ಬಿದ್ದಿದೆ.
ಅಪಘಾತದಲ್ಲಿ 21 ಸಿಬ್ಬದಿಗಳು ಗಾಯಗೊಂಡಿದ್ದಾರೆ. ರಾಜ್ ಘಡಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಸ್ ನಲ್ಲಿ ಒಟ್ಟು 50 ಸಿಬ್ಬಂದಿಗಳು ಇದ್ದರು. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರನ್ನು ಶಾಹಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.