ಹಾಸನ: ಪೋಸ್ಟಲ್ ಬ್ಯಾಲೆಟ್ ನಲ್ಲಿ ಮಾಡಿದ ಮತದಾನವನ್ನು ವಾಟ್ಸಾಪ್ ನಲ್ಲಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಯೋಧನ ಮತವನ್ನು ಅಸಿಂಧುಗೊಳಿಸಲಾಗಿದೆ.
ಹೊಳೆನರಸೀಪುರದ ಶಾಂತಿ ಗ್ರಾಮದ ಹೆಗ್ಗಡಿಹಳ್ಳಿಯ ನಂದೀಶ್ ಎಂಬ ಯೋಧನ ಮತವನ್ನು ಅಸಿಂಧುಗೊಳಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ತಿಳಿಸಿದ್ದಾರೆ.
ಪೋಸ್ಟಲ್ ಬ್ಯಾಲೆಟ್ ನಲ್ಲಿ ಮಾಡಿರುವ ಮತದಾನವನ್ನು ವಾಟ್ಸಾಪ್ ನಲ್ಲಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಅವರ ಮತ ಅಸಿಂಧುಗೊಳಿಸಲಾಗಿದೆ. ಚುನಾವಣಾ ಮಾದರಿ ನೀತಿ ಸಮಿತಿಯ ಉಲ್ಲಂಘನೆಯಡಿ ಅನೇಕ ಪ್ರಕರಣ ದಾಖಲಿಸಲಾಗಿದೆ. ಮತದಾನದ ಗೌಪ್ಯತೆ ಕಾಪಾಡಿಕೊಳ್ಳದೆ ಸಂವಿಧಾನಕ್ಕೆ ಅಗೌರವ ತೋರಿದ ಪರಿಣಾಮ ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರ ಮತ ಅಸಿಂಧುಗೊಳಿಸಲಾಗಿದೆ ಎಂದು ಹೇಳಿದ್ದಾರೆ.