
ಬಿಲಾಸ್ಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಪದ ಬಳಸಿ ನಿಂದಿಸಿದ ಯುವಕನನ್ನು ಛತ್ತೀಸ್ಗಡದ ಬಿಲಾಸ್ಪುರದಲ್ಲಿ ಬಂಧಿಸಲಾಗಿದೆ.
26 ವರ್ಷದ ಅರವಿಂದ ಕುಮಾರ್ ಸೋನಿ ಬಂಧಿತ ಆರೋಪಿ. ಮಸ್ತೂರಿ ಪಟ್ಟಣದಲ್ಲಿ ಅರವಿಂದ ಕುಮಾರ್ ನನ್ನು ಬಂಧಿಸಲಾಗಿದೆ ಎಂದು ಗ್ರಾಮೀಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರ್ಚನಾ ಝಾ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದೇವೇಂದ್ರ ಸಿಂಗ್ ಯಾದವ್ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ಅರವಿಂದ ಕುಮಾರ್, ಕಾಂಗ್ರೆಸ್ ನಾಯಕ ಕನ್ನಯ್ಯ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೋದಿ ಟೇಕಿಸುವ ಭರದಲ್ಲಿ ನಿಂದನೀಯ ಪದ ಬಳಕೆ ಮಾಡಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕ ಬಿ.ಪಿ. ಸಿಂಗ್ ದೂರು ದಾಖಲಿಸಿದ್ದರು. ಶಾಂತಿ ಭಂಗ ಪ್ರಚೋದಿಸುವ ಉದ್ದೇಶದಿಂದ ಪದ ಬಳಕೆ ಮಾಡಿದ ಆರೋಪ ದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅರವಿಂದ ಕುಮಾರ್ ನನ್ನು ಬಂಧಿಸಲಾಗಿದೆ.