ಟಗರು ಪುಟ್ಟಿ ಮಾನ್ವಿತಾಗೆ ಕೂಡಿಬಂದ ಕಂಕಣ ಭಾಗ್ಯ ; ವರ ಯಾರು ಗೊತ್ತೇ..?

ಬೆಂಗಳೂರು : ಕೆಂಡಸಂಪಿಗೆ, ಟಗರು ಸಿನಿಮಾದಲ್ಲಿ ನಟಿಸಿ ಛಾಪು ಮೂಡಿಸಿದ ನಟಿ ಮಾನ್ವಿತಾ ಕಾಮತ್ ಗೆ ಕಂಕಣ ಕೂಡಿ ಭಾಗ್ಯ ಬಂದಿದೆ.

ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ ಅರುಣ್ ಕುಮಾರ್ ಅವರು ಮಾನ್ವಿತಾ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ. ನಟಿ ಮಾನ್ವಿತಾ ಮತ್ತು ಅರುಣ್ ಕುಮಾರ್ ಅವರ ಮದುವೆ ಮೇ 1ರಂದು ಮಂಗಳೂರಿನಲ್ಲಿ ನಡೆಯಲಿದೆ. ಏಪ್ರಿಲ್ 29ರಂದು ಹಳದಿಶಾಸ್ತ್ರ ನಡೆಯಲಿದ್ದು, ಮೇ 1ರಂದು ಮಂಗಳೂರಿನಲ್ಲಿ ನಡೆಯಲಿದೆ. ಈಗಾಗಲೇ ಮದುವೆ ಸಿದ್ದತೆ ಕೂಡ ಆರಂಭವಾಗಿದೆ.

ಕೆಂಡಸಂಪಿಗೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಟಿ ಮಾನ್ವಿತಾ ಕಾಮತ್ ತಮ್ಮ ಮೊದಲ ಸಿನಿಮಾದ ಮೂಲಕವೇ ಭರವಸೆಯ ನಟಿಯಾಗಿದ್ದರು. ನಂತರ ಸಾಲು ಸಾಲು ಅವಕಾಶಗಳು ಅವರನ್ನು ಅರಸಿ ಬಂದವು.ಟಗರು ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read