ಬೆಂಗಳೂರು : ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರಿಗೆ ಊಟದ ವ್ಯವಸ್ಥೆ ಮಾಡಿದ್ದ ಅಪ್ಪು ಹಳೇ ಆಡಿಯೋ ವೈರಲ್ ಆಗುತ್ತಿದೆ.
ಹೌದು, ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನು ಬಿಟ್ಟು ಅಗಲಿದರೂ ಅವರು ಮಾಡಿರುವ ನಿಸ್ವಾರ್ಥ ಸೇವೆ, ಉಪಕಾರದ ಕೆಲಸಗಳು, ಹಲವು ದಾನ ಧರ್ಮಗಳು ಅವರ ಯಾವಾಗಲೂ ನೆನಪಿಸುತ್ತಿದೆ.
ಪುನೀತ್ ನಿಧನಕ್ಕೂ ಮುನ್ನ ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರಿಗೆ ಊಟದ ವ್ಯವಸ್ಥೆ ಕೂಡ ಮಾಡಿದ್ದರಂತೆ. ಈ ಬಗ್ಗೆ ಮುಸ್ಲಿಂ ಬಾಂಧವರ ಜೊತೆ ಅಪ್ಪು ಮಾತನಾಡಿದ್ದ ಹಳೇ ಆಡಿಯೋ ವೈರಲ್ ಆಗುತ್ತಿದೆ. ಪ್ರತಿವರ್ಷ ರಂಜಾನ್ ಗೆ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರುತ್ತಿದ್ದ ಅಪ್ಪು ಅವರಿಗೆ ಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆ ಕೂಡ ಮಾಡಿಸುತ್ತಿದ್ದರಂತೆ. ರಂಜಾನ್ ಹಬ್ಬದ ಸಂಭ್ರಮದಲ್ಲಿ ಅಭಿಮಾನಿಯೊಬ್ಬರು ಟ್ವೀಟ್ ವೈರಲ್ ಆಗುತ್ತಿದೆ. ಹಾಗೆಯೇ ಅಪ್ಪುವಿಗೆ ಕೂಡ ಮಟನ್ ಅಂದರೆ ಪಂಚಪ್ರಾಣವಂತೆ.