ಮೇ ಮೂರಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಆದಿತ್ಯ ಅಭಿನಯದ ಬಹು ನಿರೀಕ್ಷಿತ ‘ಕಾಂಗರೂ’ ಚಿತ್ರದ ಟ್ರೈಲರ್ ಇದೆ ಏಪ್ರಿಲ್ 12 ರಾತ್ರಿ 7 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಟ ಆದಿತ್ಯ ಸಾಲು ಸಾಲು ಸೋಲಿನ ಬಳಿಕ ಇದೀಗ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.
ಕಿಶೋರ್ ಮೇಗಳಮನೆ ನಿರ್ದೇಶನದ ಈ ಚಿತ್ರದಲ್ಲಿ ಆದಿತ್ಯ ಸೇರಿದಂತೆ ರಂಜನಿ ರಾಘವನ್, ಶಿವಮಣಿ, ನಾಗೇಂದ್ರ ಅರಸ್, ಕರಿಸುಬ್ಬು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಆರೋಹ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಅರ್ಜುನ ಕಿಟ್ಟು ಸಂಕಲನ, ಉದಯ ಲೀಲಾ ಛಾಯಾಗ್ರಹಣ ಮತ್ತು ಕಿಶೋರ್ ಮೇಗಳಮನೆ ಸಂಭಾಷಣೆ ಇದೆ. ಸಾಧು ಕೋಕಿಲ ಸಂಗೀತ ಸಂಯೋಜನೆ ನೀಡಿದ್ದಾರೆ.