ದಾವಣಗೆರೆ: ಆಸ್ತಿ ಕಲಹ, ಕೌಟುಂಬಿಕ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸಮೃದ್ಧವಗಿ ಬೆಳೆದು ನಿಂತಿದ್ದ ಅಡೆಕೆ ಮರಗಳ ಮಾರಣಹೋಮ ನಡೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ.
ಇಲ್ಲೋರ್ವ ಮಹಿಳೆ ತನ್ನ ಅತ್ತೆ-ಮಾವನ ಮೇಲಿನ ಕೋಪಕ್ಕೆ ತೋಟದಲ್ಲಿಡ್ಡ ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಚಿದಾನಂದಸ್ವಾಮಿ ಹಾಗೂ ಶಿವನಾಗಮ್ಮ ಎಂಬುವವರ ಹಿರಿಯ ಮಗ ಕುಮಾರಸ್ವಾಮಿ ಎಂಬುವವರ ಪತ್ನಿ ರೂಪಾ, ಕೆಲ ವರ್ಷಗಳಿಂದ ಆಸ್ತಿಯಲ್ಲಿ ಪಾಲು ಕೇಳಿದ್ದರಂತೆ. ಆದರೆ ಪಾಲು ಕೊಡಕು ಅತ್ತೆ-ಮಾವ ಹಿಂದೇಟು ಹಾಕಿದ್ದಾರೆ. ಸೊಸೆ ರೂಪಾ ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಹಲ್ಲೆ ನಡೆಸುತ್ತಿದ್ದಳು. 8 ಲಕ್ಷ ರೂಪಾಯಿ ಪಡೆದು ಮನೆ ಕಟ್ಟಿಸಿಕೊಂಡಿದ್ದಾಳೆ ಎಂದು ಮಾವ ಚಿದಾನಂದಸ್ವಾಮಿ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಆರೋಪಿ ರೂಪಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.