ರಾಮನಗರ : ಜಗತ್ತಿನಲ್ಲಿ ನಾವು ಊಹಿಸದಂತಹ ಹಲವು ಅಚ್ಚರಿ ಘಟನೆಗಳು ನಡೆಯುತ್ತಿರುತ್ತದೆ. ಕೆಲವನ್ನು ನಂಬಲು ಅಸಾಧ್ಯವಾದರೂ ನಂಬಲೇಬೇಕು. ಇದೀಗ ರಾಮನಗರದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ಶವಸಂಸ್ಕಾರದ ವೇಳೆ ಮೃತ ವ್ಯಕ್ತಿ ಎದ್ದು ಕುಳಿತಿದ್ದಾನೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚನದೊಡ್ಡಿಯಲ್ಲಿ ಈ ಘಟನೆ ನಡೆದಿದೆ. 55 ವರ್ಷದ ವ್ಯಕ್ತಿ ಶ್ರೀ ರಾಮು ಕುಸಿದು ಬಿದ್ದು ಮೃತಪಟ್ಟಿದ್ದರು. ನಂತರ ಶಿವರಾಮು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಈ ಹಿನ್ನೆಲೆ ಕುಟುಂಬದವರು ಶಿವರಾಮ್ ಅಂತ್ಯಸಂಸ್ಕಾರಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಅಂತ್ಯ ಸಂಸ್ಕಾರಕ್ಕೆ ಶವವನ್ನು ಕೊಂಡೊಯ್ಯುವಾಗ ಶಿವರಾಮ್ ಎದ್ದು ಕುಳಿತಿದ್ದಾರೆ. ಇದನ್ನು ನೋಡಿದ ಜನ ಶಾಕ್ ಆಗಿದ್ದಾರೆ.
ನಂತರ ಮತ್ತೆ ವೈದ್ಯರನ್ನು ಕರೆತಂದು ದೇಹದ ತಪಾಸಣೆ ನಡೆಸಿದ್ದಾರೆ. ವೈದ್ಯರು ಹಾರ್ಟ್ ಅಟ್ಯಾಕ್ ಆಗಿದೆ ಕೂಡಲೇ ಶಿವರಾಮ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸೂಚನೆ ನೀಡಿದ್ದಾರೆ. ಆದರೆ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಮತ್ತೆ ಶಿವರಾಮ್ ಮೃತಪಟ್ಟಿದ್ದಾರೆ. ಮತ್ತೆ ಶವವನ್ನು ಗ್ರಾಮಕ್ಕೆ ಕರೆತಂದ ಕುಟುಂಬದವರು ಜೀವ ಬರುತ್ತೆಂದು ಮತ್ತೆ ಕಾದು ಕುಳಿತಿದ್ದಾರೆ. ಅಲ್ಲದೇ ಇನ್ನೊಂದೆಡೆ ಶವ ಸಂಸ್ಕಾರಕ್ಕೆ ಕುಟುಂಬದವರು ಎಲ್ಲಾ ಸಿದ್ದತೆ ಕೂಡ ನಡೆಸಿದ್ದಾರೆ.