ಸಿಂಥೆಟಿಕ್ ಸೇಂದಿ ತಯಾರಿಕಾ ಘಟಕದ ಮೇಲೆ ಅಬಕಾರಿ ಅಧಿಕಾರಿಗಳ ದಿಢೀರ್ ದಾಳಿ; ಅಪಾರ ಪ್ರಮಾಣದ ಮದ್ಯ, ರಾಸಾಯನಿಕ ವಸ್ತುಗಳು ಜಪ್ತಿ

ರಾಯಚೂರು: ಮನುಷ್ಯನ ಪ್ರಾಣಕ್ಕೆ ಕುತ್ತುತರುವ ಹೊಸ ಬಗೆಯ ಸಿಂಥೆಟಿಕ್ ಸೇಂದಿ ದಂಧೆ ರಾಯಚೂರಿನಲ್ಲಿ ಸಕ್ರಿಯವಾಗಿದ್ದು, ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ರಾಯಚೂರು ನಗರದ ಗದ್ವಾಲ್ ರಸ್ತೆಯ ಮನೆಯೊಂದರ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಕ್ರಮವಾಗಿ ಸೇಂದಿ ತಯಾರಿಸುತ್ತಿದ್ದ ದಂಧೆಯನ್ನು ಬಯಲಿಗೆಳೆದಿದ್ದಾರೆ.

ನಿಷೇಧಿತ ಸಿ ಹೆಚ್ ಪೌಡರ್ ಎಂಬ ಕೆಮಿಕಲ್ ಬಳಸಿ ಸೇಂದಿ ತಯಾರಿಸುವುದು ಈ ಹಿಂದೆ ಬೆಳಕಿಗೆ ಬಂದಿತ್ತು. ಇದೀಗ ಅಲ್ಫಾ ಎಂಬ ಹೊಸ ರೀತಿಯ ರಾಸಾಯನಿಕ ಬಳಸಿ ಸೇಂದಿ ತಯಾರಿಸುತ್ತಿರುವುದು ಬ್ಬೆಳಕಿಗೆ ಬಂದಿದೆ. ಕೊಳಚೆ ಪ್ರದೆಶದಲ್ಲಿ ಅಲ್ಫಾ ಕೆಮಿಕಲ್ ಬಳಸಿ ಸೇಂದಿ ತಯಾರು ಮಾಡುತ್ತಿದ್ದವರನ್ನು ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳು ಹಿಡಿದಿದ್ದಾರೆ.

15 ಗ್ರಾಂ ಅಲ್ಫಾ ರಾಸಾಯನಿಕದಿಂದ 6 ಬ್ಯಾರಲ್ ಸೇಂದಿ ತಯಾರಿಸುತ್ತಿದ್ದರು. ಅಲ್ಲದೇ ಲೀಟರ್ ಗೆ 40-50 ರೂನಂತೆ 1000 ಲೀಟರ್ ಸೇಂದಿ ಸಂಗ್ರಹಿಸಿ ಇಡಲಾಗಿತ್ತು. ಇವುಗಳನು ಜಪ್ತಿ ಮಾಡಿರುವ ಅಧಿಕಾರಿಗಳು ಅಲ್ಫಾ ಕೆಮಿಕಲ್, ಸಿಟ್ರಿಕ್ ಆಸಿಡ್, ಪೇಸ್ಟ್, ವೈಟ್ ಬಿಸ್ಕೆಟ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕಿಂಗ್ ಪಿನ್ ವಾಹಿದ್ ಪರಾರಿಯಾಗಿದ್ದು, ಆತನ ಸಹಚರರಾದ ಅರ್ಬಾಸ್, ಜಲಾಲ್ ನನ್ನು ವಶಕ್ಕೆ ಪಡೆಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read