ಮೊಜಾಂಬಿಕ್ ನ ಉತ್ತರ ಕರಾವಳಿಯಲ್ಲಿ ದೋಣಿ ಮಗುಚಿ 95 ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 130 ಜನರನ್ನು ಹೊತ್ತ ಮೀನುಗಾರಿಕಾ ದೋಣಿ ನಾಂಪುಲಾ ಪ್ರಾಂತ್ಯದ ಬಳಿಯ ದ್ವೀಪಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೋಣಿಯು ಓವರ್ ಲೋಡ್ ಆಗಿದ್ದರಿಂದ ನಿಯಂತ್ರಣ ತಪ್ಪಿ ಮುಳುಗಿದೆ ಎಂದು ನಂಬುಲಾ ರಾಜ್ಯ ಕಾರ್ಯದರ್ಶಿ ಜೈಮ್ ನೆಟೊ ಹೇಳಿದ್ದಾರೆ.
ಮೃತರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ ಎಂದು ಅವರು ಹೇಳಿದರು. ರಕ್ಷಣಾ ಸಿಬ್ಬಂದಿ ಐದು ಬದುಕುಳಿದವರನ್ನು ಪತ್ತೆಹಚ್ಚಿದ್ದರು ಮತ್ತು ಇತರರನ್ನು ಹುಡುಕುತ್ತಿದ್ದರು, ರಕ್ಷಣಾ ಕಾರ್ಯಾಚರಣೆ ನಡೆಸಲು ಬಹಳ ಕಷ್ಟವಾಗಿತ್ತು ಎಂದು ಹೇಳಲಾಗಿದೆ . ಕಾಲರಾ ಬಗ್ಗೆ ತಪ್ಪು ಮಾಹಿತಿಯಿಂದ ಉಂಟಾದ ಭೀತಿಯಿಂದಾಗಿ ಹೆಚ್ಚಿನ ಪ್ರಯಾಣಿಕರು ಮುಖ್ಯ ಭೂಭಾಗದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನೆಟೊ ಹೇಳಿದರು.