ವಿಜಯನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಕ್ರಮಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಆದಾಗ್ಯೂ ಅಧಿಕಾರಿಗಳು, ಪೊಲೀಸರ ಕಣ್ತಪ್ಪಿಸಿ ಮತದಾರರಿಗೆ ಆಮಿಷವೊಡ್ಡಲು ರಾಜಕೀಯ ಮುಖಂಡರು ನಡೆಸುತ್ತಿರುವ ಖತರ್ನಾಕ್ ಐಡಿಯಾಗಳು, ಗಿಫ್ಟ್ ಗಳು, ಕಂತೆ ಕಂತೆ ಹಣ ಜಪ್ತಿಯಾಗುತ್ತಲೇ ಇದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಲಾಡ್ಜ್ ಒಂದರಲ್ಲಿ ರಾಶಿ ರಾಶಿ ಸೀರೆಗಳು ಪತ್ತೆಯಾಗಿವೆ. ದಾಖಲೆ ಇಲ್ಲದೇ ಅನಧಿಕೃತವಾಗಿ ಸೀರೆಗಳನ್ನು ಲಾಡ್ಜ್ ನಲ್ಲಿ ಸಗ್ರಹಿಸಿಡಲಾಗಿದ್ದು, ಪೊಲೀಸರು ಜಪ್ತಿ ಮಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷವೊಡ್ಡಿ, ಸೀರೆಗಳನ್ನು ಹಂಚಲು ಇಲ್ಲಿ ಸಂಗ್ರಹಿಸಿಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೊಸಪೇಟೆ ಡಿವೈ ಎಸ್ ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸೀರೆ ರಾಶಿಗಳು ಯಾವ ಪಕ್ಷಕ್ಕೆ ಸೇರಿದ್ದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಲಾಡ್ಜ್ ನ ಎರಡು ಕೊಠಡಿಗಳಲ್ಲಿ ಸೀರೆ ಸಂಗ್ರಹಿಸಿಡಲಾಗಿತ್ತು. ಸದ್ಯ ಸೀರೆ ರಾಶಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.